ಶಿಖಂಡಿ

Movie Review: ಸಪ್ತ ಜೋಗತಿಯರ ಭರ್ಜರಿ ಪ್ರತಿಕಾರ!

ಚಿತ್ರ: ಶಿಖಂಡಿ
ನಿರ್ದೇಶಕರು: ವಿ. ಗುರುಮೂರ್ತಿ
ನಿರ್ಮಾಪಕರು: ಪೋಲ ಪ್ರವೀಣ್ ಕುಮಾರ್
ಕಲಾವಿದರು: ಯುವರಾಜ್ ಗೌಡ, ನಿಖಿಲ್, ನೀತು ವನಜಾಕ್ಷಿ ಮೊದಲಾದವರು….
ರೇಟಿಂಗ್ : 3.5/5

ಜೋಗತಿಯರು ಭವಿಷ್ಯ ನುಡಿಯುವ ಕಥೆಗಳನ್ನು ಸಾಕಷ್ಟು ಕೇಳಿದ್ದೇವೆ. ಆದರೆ ಅಂಥ ಬರೋಬ್ಬರಿ ಏಳು ಮಂದಿ ಜೋಗತಿಯರ ಆತ್ಮಗಳ‌ ಹೋರಾಟವನ್ನು ಕಥೆಗೆ ಪೂರಕವಾಗಿ ತೋರಿಸಲಾಗಿದೆ.

ಹಳ್ಳಿಗಾಡೊಂದರಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯುವುದು ಸಂಗೀತ ಕನಸು.‌ ಈ‌ ಕನಸನ್ನು ನನಸು ಮಾಡಲು ಸೂರ್ಯ ಮತ್ತು ಆತನ ಜತೆಗಿರುವ ಇಂಜಿನಿಯರಿಂಗ್ ತಂಡ ಕೈ ಜೋಡಿಸುತ್ತದೆ. ಹಾಗೆ ನಗರದಿಂದ ಹಳ್ಳಿಗೆ ಬಂದು ಆಸ್ಪತ್ರೆ ಕಟ್ಟುವ ಯೋಜನೆ ಹಾಕಿದ ಸೂರ್ಯ ಮತ್ತು ತಂಡಕ್ಕೆ ದೆವ್ವದ ಕಾಟ ಶುರುವಾಗುತ್ತದೆ. ‌ಹಾಗಾದರೆ ಅದು ಯಾರ ದೆವ್ವ? ಒಟ್ಟು ಎಷ್ಟು ದೆವ್ವಗಳಿವೆ? ಅವುಗಳು ಸೂರ್ಯ ತಂಗಿರುವ ಜಾಗಕ್ಕೆ ಕಾಲಿಡಲು ಕಾರಣವೇನು? ಮೊದಲಾದ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಾದರೆ ಪೂರ್ತಿ ಸಿನಿಮಾ‌ ನೋಡಲೇಬೇಕು.

ಆಸ್ಪತ್ರೆ ಕಟ್ಟಲು ಆಸ್ಪತ್ರೆ ಕಟ್ಟಲು ಆಸಕ್ತಿ ವಹಿಸುವ ಸಂಗೀತ ಪಾತ್ರವನ್ನು ನವನಟಿ ಖ್ಯಾತಿ ನಿರ್ವಹಿಸಿದ್ದಾರೆ. ಇಂಜಿನಿಯರಿಂಗ್ ತಂಡ ಕಟ್ಟಿಕೊಂಡು ಬರುವ ಸೂರ್ಯನಾಗಿ ಯುವರಾಜ್ ಗೌಡ ನಟಿಸಿದ್ದಾರೆ.
ಪ್ರಶಸ್ತಿ ವಿಜೇತ ಜೋಗತಿ ಮಂಜಮ್ಮ ಇಲ್ಲಿ ತಮ್ಮದೇ ಪಾತ್ರದ ಮೂಲಕ ವಿಶೇಷ ಎಂಟ್ರಿ ನೀಡಿದ್ದಾರೆ. ಇಲ್ಲಿ ಏಳು ಮಂದಿ ಜೋಗತಿಯರು ಮಂಗಳಮುಖಿಯ ರೂಪದಲ್ಲಿತ್ತಾರೆ. ಬಿಗ್ ಬಾಸ್ ಖ್ಯಾತಿಯ ನೀತು ವನಜಾಕ್ಷಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಘವೇಂದ್ರ ಮೊದಲಾದವರು ಪಾತ್ರಗಳನ್ನು ‌ತಮ್ಮ ಮೈಮೇಲೆ ಆವಾಹಿಸಿಕೊಂಡಂತೆ ನಟಿಸಿದ್ದಾರೆ.

ಚಿತ್ರದಲ್ಲಿ ಸೂರ್ಯ ಮಾತ್ರವಲ್ಲದೆ ಪೂರ್ಣಚಂದ್ರ ಎನ್ನುವ ಮತ್ತೊಂದು ಪ್ರಮುಖ ಪಾತ್ರವನ್ನು ಮತ್ತೋರ್ವ ನಟ‌ ನಿಖಿಲ್ ನಿಭಾಯಿಸಿದ್ದಾರೆ. ಖಳನಟರಾಗಿ ರಾಜ್ ದೀಪಕ್ ಶೆಟ್ಟಿ ಅದ್ಭುತ ಅಭಿನಯ ನೀಡಿದ್ದಾರೆ. ಇವರ ಪಾತ್ರಕ್ಕೆ ಸ್ಫೂರ್ತಿ ನೀಡುವ ಪಾತ್ರದಲ್ಲಿ ಬಲರಾಜ್ವಾಡಿ ಕಾಣಿಸಿಕೊಂಡಿದ್ದಾರೆ.

ಆಸ್ಪತ್ರೆ ಕಟ್ಟಲು ಹಳ್ಳಿ ಸೇರಿಕೊಂಡ ಇಂಜಿನಿಯರ್ ತಂಡಕ್ಕೆ ಅಲ್ಲೊಂದು ನೌಕರರ ವರ್ಗವೇ ಇದೆ. ಅಡುಗೆಯಾಕೆಯಾಗಿ ಕಾಮಿಡಿ ಕಿಲಾಡಿಗಳು ನಯನಾ ಮತ್ತು ಸಿಂಹ ಎನ್ನುವ ಪಾತ್ರದಲ್ಲಿ ಕಿರಣ್ ಪ್ರೇಕ್ಷಕರನ್ನು ನಗಿಸುತ್ತಾರೆ. ಸೂರ್ಯನ ಸ್ಬೇಹಿತನ ಪಾತ್ರಮಾಡಿರುವ ವಿಜಯ್ ಚೆಂಡೂರ್ ಕೂಡ ಹಾಸ್ಯಕ್ಕೆ ಸಾಥ್ ನೀಡಿದ್ದಾರೆ.

ನಂಬಿಕೆ ಮತ್ತು ತಾಯಿಯ ಮಮತೆ ಸುತ್ತ ಸಾಗುವ ಕಥೆ ಇದು‌. ಕ್ಲೈಮ್ಯಾಕ್ಸ್ ಹಂತದಲ್ಲಿ ಮೈ ರೋಮಾಂಚನಗೊಳಿಸುವ ಸನ್ನಿವೇಶಗಳಿವೆ. ಅವೆಲ್ಲವನ್ನೂ ನೋಡಬೇಕಾದರೆ ಥಿಯೇಟರ್ ಗೆ ಹೋಗಬೇಕು.

Be the first to comment

Leave a Reply

Your email address will not be published. Required fields are marked *

Translate »
error: Content is protected !!