ಚಿತ್ರ: ಲೈಫ್ ಟುಡೆ
ನಿರ್ದೇಶನ : ಕಾಂತ ಕನ್ನಲ್ಲಿ
ನಿರ್ಮಾಣ : ಪ್ರದೀಪ್ ಎ
ತಾರಾಗಣ : ಕಿರಣ್ ಆದಿತ್ಯ, ಲೇಖಾ ಚಂದ್ರ, ರಥರ್ವ್ ಪೊನ್ನಣ್ಣ ಮೊದಲಾದವರು.
ರೇಟಿಂಗ್: 3.5
ಪ್ರೇಮಕಥೆಯೊಂದನ್ನು ಎಲ್ಲ ವರ್ಗದ ಪ್ರೇಕ್ಷಕರನ್ನು ತಲುಪುವ ಹಾಗೆ ಹೇಗೆ ಚಿತ್ರೀಕರಿಸಬಹುದು ಎಂದು ಪ್ರಶ್ನಿಸಿದರೆ ಅದಕ್ಕೆ ನೀಡಬಹುದಾದ ಉತ್ತರವೇ ಲೈಫ್ ಟುಡೆ.
ತಂದೆ ಮಗಳ ಪ್ರೀತಿಯಿಂದ ಶುರುವಾದ ಕಥೆಯಲ್ಲಿ ಆಕೆಯ ಕನಸಿನ ಪ್ರೇಮಕ್ಕೆ ಎಷ್ಟೊಂದು ಪ್ರಾಮುಖ್ಯತೆ ಇತ್ತು? ಅದನ್ನು ಅರ್ಥವಾಗಿಸಿಕೊಂಡು ಹೋಗದೇ ಆದ ಸಮಸ್ಯೆ ಏನು ಎನ್ನುವುದು ಚಿತ್ರದ ತಿರುಳಾಗಿದೆ. ಶಿವು ಒಬ್ಬ ಅನಾಥ ಯುವಕ. ಆತನಲ್ಲಿ ಪ್ರೀತಿಯ ಗಿಡವನ್ನು ನಡುವವಳು ಅಮೃತಾ. ಆದರೆ ಆ ಗಿಡವನ್ನು ಹೊಸಕಿ ಹಾಕಲು ಯತ್ನಿಸುವವರು ಯಾರು? ಮತ್ತು ಅದರ ಪರಿಣಾಮವೇನು ಎನ್ನುವುದನ್ನು ತುಂಬ ರಸವತ್ತಾಗಿ ತೋರಿರುವ ಚಿತ್ರವೇ ಲೈಫ್ ಟುಡೆ.
ಚಿತ್ರದ ಕೇಂದ್ರ ಕಥಾಪಾತ್ರವಾದ ಶಿವು ಆಗಿ ಕಾಣಿಸಿರುವವರು ಕಿರಣ್ ಆದಿತ್ಯ. ತಮ್ಮ ದೈಹಿಕವಾದ ಎತ್ತರ ಮತ್ತು ಪಾತ್ರದ ಶಕ್ತಿಯಿಂದ ಪ್ರೇಕ್ಷಕರ ಮನದಲ್ಲಿ ಜಾಗ ಪಡೆಯುತ್ತಾರೆ. ಕಥಾ ನಾಯಕಿ ಅಮೃತಾ ಪಾತ್ರವನ್ನು ಲೇಖಾಚಂದ್ರ ನಿರ್ವಹಿಸಿದ್ದಾರೆ. ಉಳಿದಂತೆ ನಾಯಕಿಯ ತಂದೆಯಾಗಿ
ತಬಲಾ ನಾಣಿ ಗಣೇಶಪ್ಪನೆಂಬ ಪಾತ್ರದ ಮೂಲಕ ಸಹಜ ನಟನೆ ನೀಡಿದ್ದಾರೆ. ಇತರ ಪ್ರಮುಖ ಪಾತ್ರಗಳಲ್ಲಿ ರಥರ್ವ್ ಪೊನ್ನಣ್ಣ, ಕಾಕ್ರೋಚ್ ಸುಧಿ, ಅಪೂರ್ವ ಶ್ರೀ ಮೊದಲಾದವರ ಅಭಿನಯವಿದೆ.
ಶ್ರೀಧರ್ ಸಂಭ್ರಮ್ ಅವರ ಸಂಗೀತದ ಹಾಡುಗಳು ಚಿತ್ರದ ಜೀವಾಳ. ಪ್ರೇಮಗೀತೆ, ವಿರಹಗೀತೆ ಸೇರಿದಂತೆ ವೈವಿಧ್ಯಮಯ ಸಂಗೀತವನ್ನು ಮನಮುಟ್ಟುವಂತೆ ನೀಡಿದ್ದಾರೆ. ಚಿತ್ರ ನೀಡುವ ಸಂದೇಶ ಕೂಡ ಅಷ್ಟೇ ಪ್ರಮುಖವಾಗಿರುವಂಥದ್ದು. ಪ್ರೇಮಕಥೆಯೊಂದರ ಮೂಲಕ ಹೇಗೆ ಇಂದಿಗೂ ಕೌಟುಂಬಿಕ ಸಂದೇಶ ಸಾರಬಹುದೆಂದು ನಿರೂಪಿಸಿರುವ ಚಿತ್ರವೇ ಲೈಫ್ ಟುಡೇ.





Be the first to comment