ಚಿತ್ರ ವಿಮರ್ಶೆ : ವಿಕೃತಿಗೆ ಉತ್ತರವಾಗುವ ಕೃತಿ

ಚಿತ್ರ ವಿಮರ್ಶೆ : ವಿಕೃತಿಗೆ ಉತ್ತರವಾಗುವ

1981ರಲ್ಲಿ ತರೆಗೆಬಂದಿದ್ದ, ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ರಂಗನಾಯಕಿ’ ಎಂಬ ಕ್ಲಾಸಿಕ್ ಚಿತ್ರ ಕನ್ನಡ ಚಿತ್ರರಂಗದ ಮೈಲಿಗಲ್ಲಾಗಿದ್ದು ನಿಮ್ಗೇ ಗೊತ್ತೇ ಇದೆ. ಈಗ ಇದೇ ಟೈಟಲ್ ಇಟ್ಟುಕೊಂಡು ನಿರ್ದೇಶಕ ದಯಾಳ್ ಚಿತ್ರ ಮಾಡಿ ನೋಡುಗನಿಗೆ ಒಂದು ಅಪರೂಪದ ಅನುಭವ ನೀಡುವಲ್ಲಿ ಸಫಲರಾಗಿದ್ದಾರೆ. ಇಲ್ಲಿ, ಹೆಣ್ಣೊಬ್ಬಳು ಏಕಾಂಗಿಯಾಗಿ ತನಗೆದುರಾದ ಕಷ್ಟವನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ಇಮೋಷನಲ್ ಆಗಿ ಪ್ರಸೆಂಟ್ ಮಾಡಿದ್ದಾರೆ.
ಹೆಣ್ಣಿನ ಧೈರ್ಯವನ್ನೂ ತೋರಿಸುತ್ತಲೇ, ದಯಾಳ್ ಅನೇಕ ವಿಚಾರಗಳನ್ನು ದೃಶ್ಯದಿಂದ ದೃಶ್ಯಕ್ಕೇ ಹೇಳುತ್ತಲೇ ಹೋಗುತ್ತಾರೆ. ರೇಪ್ ವಿಕ್ಟಿಮ್ ಬಗ್ಗೆ ಸಾಕಷ್ಟು ಚಿತ್ರಗಳು ಈಗಾಗಲೇ ಬಂದಿದೆ. ಆದರೆ ಈ ಪ್ಲಾಟ್ ಅನ್ನು ಪೊಯೆಟಿಕ್ ಆಗಿ, ಸೆನ್ಸಿಬಲ್ ಆಗಿ ಪ್ರೆಸೆಂಟ್ ಮಾಡಿರೋದು ದಯಾಳ್ ಒಬ್ಬರೇ ಇರಬೇಕು. ದಯಾಳ್ ಅವರ ಕಿರು ಕಾದಂಬರಿ ಚಿತ್ರವಾಗುವಲ್ಲಿ ಸಂಭಾಷಣೆಕಾರರಾದ ನವೀನ್‍ಕೃಷ್ಣ ಅವರ ಸಾಥ್ ಪ್ರತೀ ಸೀನ್‍ನಲ್ಲೂ ಸ್ಪಷ್ಟವಾಗುತ್ತದೆ.

ಚಿತ್ರದ ಕಥೆಯ ವಿಚಾರಕ್ಕೆ ಬರೋದಾದ್ರೆ. ರಂಗನಾಯಕಿ (ಅದಿತಿ ಪ್ರಭುದೇವ) ಬೋಲ್ಡ್&ಬ್ಯೂಟಿಫುಲ್ ಗರ್ಲ್. ಆಕೆಗೆಯ ಮಾತು ನೇರ, ದಿಟ್ಟ ಮತ್ತು ಸ್ಪಷ್ಟ. ಆಕೆಯ ಬದುಕಿನಲ್ಲಿ ರೇಪ್ ಅನ್ನುವ ಕೆಟ್ಟ ಆಕ್ಸಿಡೆಂಟ್ ನಡೆದು ಹೋಗಿಬಿಡುತ್ತೆ. ರೇಪ್‍ಗೆ ಒಳಗಾದ `ರಂಗನಾಯಕಿ’ ಕೊನೆಗೂ ರಂಗನಾಯಕಿಯಾಗಿ ಉಳಿಯುತ್ತಾಳಾ? ಇಲ್ಲ ಪರಿಸ್ಥಿತಿಯ ಕೈಗೊಂಬೆಯಾಗಿ ಬದಲಾಗುತ್ತಾಳಾ? ಆಕೆಯ ಅಸಲಿ ಪ್ರೀತಿ ಯಾವುದು? ಎಂಬುದಕ್ಕೆ ಉತ್ತರ ಸಿಗಬೇಕಾದರೆ ನೀವು ರಂಗನಾಯಕಿಯ ಬದುಕಿನ ಬವಣೆಗೆ, ಆಕೆಯ ದಿಟ್ಟ ನಿರ್ಧಾರಗಳಿಗೆ ಸಾಕ್ಷಿಯಾಗಬೇಕು.

ಇನ್ನು, ಫರ್‍ಮಾನ್ಸ್ ವಿಚಾರಕ್ಕೆ ಬರೊದಾದರೆ ‘ರಂಗನಾಯಕಿ’ಯಾಗಿ ಅದಿತಿಯವರ ಬೆಸ್ಟ್ ಎಫರ್ಟ್ ಸಾಕಷ್ಟು ಸೀನ್‍ನಲ್ಲಿ ಕಾಣುತ್ತದೆ. ದೈಹಿಕ ಮತ್ತು ಮಾನಸಿಕ ನೋವು-ಹಿಂಸೆಯನ್ನು ತನ್ನದೇ ಮಿತಿಯಲ್ಲಿ ಅದಿತಿ ಪ್ರಸೆಂಟ್ ಮಾಡಿದ್ದಾರೆ. ಇಷ್ಟು ದಿನ ಸೀರಿಯಲ್‍ನಲ್ಲಿ ನಟಿಸುತ್ತಿದ್ದ ತ್ರಿವಿಕ್ರಮ್ ಬೆಳ್ಳಿತೆರೆ ಮೇಲೆ ಗಣಿತ ಮೇಷ್ಟ್ರಾಗಿ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಭಗ್ನಪ್ರೇಮಿಯಾಗಿ, ಶ್ರೀನಿವಾಸ್ ತನ್ನದೇ ಕಥೆಯನ್ನು ಹೇಳುವಾಗ ಪಾತ್ರವಾಗಿ ಮಾರ್ಪಾಡಾಗಿ ನೋಡುಗನ ಒಂದು ಹನಿ ಕಣ್ಣೀರಿಗೆ ಕಾರಣರಾಗುತ್ತಾರೆ.

ಖಡಕ್ ಪೋಲಿಸ್ ಆಫಿಸರ್ ಪಾತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಉಳಿದಂತೆ ಎಲ್ಲಾ ಕಲಾವಿದರೂ ದಯಾಳ್ ಗರಡಿಯಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡುವ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ. ಕೊನೆಯಲ್ಲಿ, ಪುಟ್ಟಣ್ಣರ ಚಿತ್ರದ ಟೈಟಲ್ ಇಟ್ಟುಕೊಂಡು ದಯಾಳ್ ಎನು ಮಾಡಿದ್ದಾರೆ ಅನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಅಸಲಿಗೆ ಚಿತ್ರದ ಟೈಟಲ್ ಏನೇ ಇದ್ದರೂ ಚಿತ್ರದ ಕೊನೆಯಲ್ಲಿ ಕಾಡುವುದು ಚಿತ್ರದ ಕಂಟೆಂಟ್. ಟೈಟಲ್‍ನ್ನೂ ಮೀರುವ ಕಂಟೆಂಟ್ ಇರುವ ಚಿತ್ರವನ್ನು ದಯಾಳ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

‘ರಂಗನಾಯಕಿ’ ನೋ ಡೌಟ್ ‘ದಯಾಳ್ ಬ್ರಾಂಡ್’ ಚಿತ್ರ. ಬಿಕಾಸ್, ಚಿತ್ರದ ಆರಂಭದಲ್ಲಿ ಲ್ಯಾಗ್ ಅನ್ನಿಸುವ ಸೀನ್‍ಗಳು ಚಿತ್ರದ ಕೊನೆಯಲ್ಲಿ ಧಗ್ಗನೆ ಸಾಕಷ್ಟು ಇಂಪಾರ್ಟೆನ್ಸ್ ಪಡೆದುಕೊಳ್ಳುತ್ತದೆ. ಸಣ್ಣ ಸಣ್ಣ ಪಾತ್ರಗಳು ಕಥೆಯೊಳಗೆ ಬೆಸೆದು ಹೋಗುತ್ತದೆ.
‘ಶೀಲ ಕಳೆದುಕೊಳ್ಳೋದು’ ಅನ್ನೋದು ಅಂದರೆ ‘ರಂಗನಾಯಕಿ’ಯ ದೃಷ್ಟಿಯಲ್ಲಿ ಏನು ಅನ್ನೋದೆ ಚಿತ್ರದ ಕನೆಕ್ಟಿಂಗ್ ಪಾಯಿಂಟ್ ಅಂದರೆ ತಪ್ಪಾಲಾಗಲಾರದು.

ದಯಾಳ್ ಹೆಣ್ಣಿನ ಧೈರ್ಯ ಮತ್ತು ಅಸಹಾಯಕತೆಯನ್ನೂ ತೋರಿಸುತ್ತಾ ಸಮಾಜಕ್ಕೆ ಕನ್ನಡಿಯಾಗುವ ಪ್ರಯತ್ನ ಮಾಡಿದ್ದಾರೆ. ಅಪರೂಪಕ್ಕೆ ಲಿಟ್ರೇಚರ್ ಸಿನಿಮಾವಾಗುವ, ಸಿನಿಮಾ ಲಿಟ್ರೇಚರ್ ಆಗುವ ಅದ್ಭುತವನ್ನು ‘ರಂಗನಾಯಕಿ’ಯಿಂದ ನೀವು ನಿರೀಕ್ಷಿಸಬಹುದು.

@bcinemas.in

Be the first to comment

Leave a Reply

Your email address will not be published. Required fields are marked *

Translate »
error: Content is protected !!