Jog 101 Movie Review : ಕಳೆದು ಹೋಗುವ “ಜೋಗ್ 101”

ಚಿತ್ರ: ಜೋಗ್ 101

ನಿರ್ದೇಶಕ: ವಿಜಯ್ ಕನ್ನಡಿಗ
ತಾರಾ ಬಳಗ: ವಿಜಯ್ ರಾಘವೇಂದ್ರ, ತೇಜಸ್ವಿನಿ ಶೇಖರ್, ತಿಲಕ್ ಶೇಖರ್, ರಾಜೇಶ್ ಇತರರು

ರೇಟಿಂಗ್: 3.5/5

ಜೋಗ ಜಲಪಾತವನ್ನು ನೋಡಲು ಹೋದ ಹುಡುಗ, ಹುಡುಗಿ ಕಳೆದು ಹೋದಾಗ ಅವರನ್ನು ಹುಡುಕಿಕೊಂಡು ಹೋಗುವ ನಾಯಕನಿಗೆ ಸಿಗುವ ಅನಿರೀಕ್ಷಿತಗಳ ಸರಮಾಲೆ ‘ಜೋಗ್ 101’.

ಸಸ್ಪೆನ್ಸ್ ಟ್ರೈಲರ್ ಚಿತ್ರವಾದ ‘ಜೋಗ್ 101’ ರಲ್ಲಿ ನಾಯಕನಿಗೆ ಹುಡುಕಾಟ ಅಷ್ಟು ಸುಲಭವಾಗುವುದಿಲ್ಲ. ಇಲ್ಲಿ ಸಾಕಷ್ಟು ತಿರುವುಗಳು ಸಂಕೀರ್ಣವಾಗುತ್ತಾ ಹೋಗುತ್ತವೆ. ಕೊನೆಗೂ ಹುಡುಕಾಟಕ್ಕೆ ಅಂತ್ಯ ದೊರೆತು ಚಿತ್ರ ಪ್ರೇಕ್ಷಕರಿಗೆ ನಿರಾಳ ಅನಿಸುತ್ತದೆ.

ಚಿತ್ರದಲ್ಲಿ ಸಸ್ಪೆನ್ಸ್ ಜೊತೆಗೆ ಲವ್ ಸಾಂಗ್, ಮಂಜು, ಮಳೆ, ಪ್ರೇಮ ಎಲ್ಲವೂ ಇದೆ. ಒಟ್ಟಾರೆ ಪ್ರೇಕ್ಷಕರಿಗೆ ಹಿತಾನುಭವ ಆಗುತ್ತದೆ.

ಚಿತ್ರ ದ್ವಿತೀಯಾರ್ಧದಲ್ಲಿ ಹಲವು ಟ್ವಿಸ್ಟ್ ತೆಗೆದುಕೊಂಡು ಅಚ್ಚರಿ ಮೂಡಿಸುತ್ತದೆ. ಸುನಿಲ್ ಹಾಲ್ಗೇರಿ ಜೋಗದ ಅಂದವನ್ನು ಅತ್ಯುತ್ತಮವಾಗಿ ಸೆರೆ ಹಿಡಿದು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿರುವ ಅವಿನಾಶ್ ಬಸುಟ್ ಕರ್ ಚಿತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ.

ವಿಜಯ ರಾಘವೇಂದ್ರ ಅಭಿನಯ ಸೂಪರ್. ರಾಜೇಶ್ ನಟರಂಗ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರ ಪಟ್ಟಿಗೆ ಜೋಗ್ 101 ಹೊಸ ಸೇರ್ಪಡೆ ಎನ್ನಬಹುದು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!