Movie Review: ದುಷ್ಟ ಶಕ್ತಿಯ ಸಂಹಾರ ಮಾಡುವ ತಾಯ್ತ

ಚಿತ್ರ: ತಾಯ್ತ

ನಿರ್ದೇಶನ: ಲಯ ಕೋಕಿಲ

ತಾರಾ ಬಳಗ: ಶಾಹಿದ್, ರಿಯಾನ್, ಹರ್ಷಿಕಾ ಪೂಣಚ್ಚ, ಲಯ ಕೋಕಿಲ, ಇತರರು

ರೇಟಿಂಗ್: 3/5

ದುಷ್ಟ ಶಕ್ತಿಯನ್ನು ಮಣಿಸುವ ದೈವ ಶಕ್ತಿಯ ಮಹತ್ವದ ಬಗ್ಗೆ ಹೇಳುವ ಚಿತ್ರ ಈ ವಾರ ತೆರೆಗೆ ಬಂದಿರುವ ತಾಯ್ತ.

ಕಾಲೇಜಿನಲ್ಲಿ ಓದುವ ಸ್ನೇಹಿತರ ನಡುವೆ ಉಂಟಾಗುವ ಮೇಲು – ಕೀಳು ಎನ್ನುವ ಭಾವನೆಯ ಪರಿಣಾಮವಾಗಿ ಯಾವ ರೀತಿಯ ಸಮಸ್ಯೆ ಉಂಟಾಗುತ್ತದೆ ಎನ್ನುವ ಸಂದೇಶ ಈ ಚಿತ್ರದಲ್ಲಿದೆ. ಕರಿಯನಿಗೆ ಜಾನ್ ಹಾಗೂ ಸ್ನೇಹಿತರು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಮುಂದೆ ಸ್ನೇಹಿತರು ಚಿಕ್ಕಮಗಳೂರಿನ ಪ್ರದೇಶವೊಂದಕ್ಕೆ ಹೋದಾಗ ಅಲ್ಲಿ ಯಾವ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾರೆ ಎನ್ನುವುದಕ್ಕೆ ಚಿತ್ರದ ಕ್ಲೈಮಾಕ್ಸ್ ನಲ್ಲಿ ಉತ್ತರವಿದೆ.

ಹರ್ಷಿಕ ಪೂಣಚ್ಚ ಅವರ ಪಾತ್ರ ಹೈಲೈಟ್ ಆಗಿ ಮೂಡಿ ಬಂದಿದೆ. ಕಾಲೇಜ್ ಪ್ರಿನ್ಸಿಪಾಲ್ ಪಾತ್ರದಲ್ಲಿ ಸಾಧು ಕೋಕಿಲ ನಗಿಸುತ್ತಾರೆ. ಸೆಕೆಂಡ್ ಹ್ಯಾಪ್ ನಲ್ಲಿ ಬರುವ ಮಾಟಗಾರನ ಪಾತ್ರದಲ್ಲಿ ನಿರ್ದೇಶಕ ಲಯ ಕೋಕಿಲ ಅವರು ಪ್ರಬುದ್ಧ ಅಭಿನಯವನ್ನು ತೋರಿಸಿದ್ದಾರೆ. ದೆವ್ವದ ಕಾಟ ಇರಬಹುದು ಎಂದು ಭಾವಿಸಿದ ಪ್ರೇಕ್ಷಕರಿಗೆ ನಿರ್ದೇಶಕರು ಇಲ್ಲಿ ಟ್ವಿಸ್ಟ್ ನೀಡಿದ್ದಾರೆ.

ಸ್ವಾಮೀಜಿಯಾಗಿ ಶೋಭರಾಜ್ ಅವರ ಅಭಿನಯ ಪ್ರೇಕ್ಷಕರ ಮೇಲೆ ಪ್ರಭಾವ ಬೀರುತ್ತದೆ.ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಬಹುತೇಕ ಶೂಟಿಂಗ್ ಮಾಡಲಾಗಿದೆ. ನಿರ್ದೇಶಕರು ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತಮ ಚಿತ್ರ ನೀಡುವ ಯತ್ನ ಮಾಡಿದ್ದಾರೆ.

ಕಾಮಿಡಿ, ಥ್ರಿಲ್ಲರ್ ಜೊತೆಗೆ ಲವ್ ಸ್ಟೋರಿ ಇಷ್ಟಪಡುವ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟ ಆಗಬಹುದು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!