ರಾಮಾಯಣ

‘ರಾಮಾಯಣ’ ಬುಕಿಂಗ್‌ನಲ್ಲಿ ಏರಿಕೆ

ರಣ್‌ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಸೇರಿದಂತೆ ದೊಡ್ಡ ತಾರಾಗಣ ಹೊಂದಿರುವ ‘ರಾಮಾಯಣ’ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ  ದಿಢೀರ್ ಏರಿಕೆ ಕಂಡಿದೆ.

ಆರಂಭದಲ್ಲಿ ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ‘ರಾಮಾಯಣ’ ಚಿತ್ರದ ಮುಂಗಡ ಬುಕಿಂಗ್ ಸಾಧಾರಣವಾಗಿತ್ತು. ಆದರೆ ನಿರ್ಮಾಪಕ ನಮಿತ್ ಮಲ್ಹೋತ್ರಾ ರೂಪಿಸಿದ ಪ್ರಚಾರ ತಂತ್ರ  ಪರಿಣಾಮ ಬೀರಿದೆ. ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂನಲ್ಲಿ ಆಯೋಜಿಸಿದ್ದ ವಿಶೇಷ ಪ್ರದರ್ಶನ ಚಿತ್ರದ ಬುಕಿಂಗ್ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಅಮೆರಿಕದಲ್ಲಿ ಟಿಕೆಟ್ ಬುಕಿಂಗ್   ಶೇ. 27ರಷ್ಟು ಹೆಚ್ಚಾಗಿರುವುದು ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ.

ವಿಶೇಷ ಪ್ರದರ್ಶನಕ್ಕೆ ಅಮೆರಿಕದ ಜನಪ್ರಿಯ ಕಂಟೆಂಟ್ ಕ್ರಿಯೇಟರ್‌ಗಳನ್ನು ಆಹ್ವಾನಿಸಲಾಗಿತ್ತು.   ಯಶ್, ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಹಲವು ಕಲಾವಿದರು ಮತ್ತು ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿನಿಮಾ ವೀಕ್ಷಿಸಿದ ಬಳಿಕ ಅತಿಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

ವಿಶೇಷ ಪ್ರದರ್ಶನ ವೀಕ್ಷಿಸಿದ ಹಲವರು ಚಿತ್ರದ ದೃಶ್ಯ ವೈಭವ ಮತ್ತು ನಿರ್ಮಾಣ ಗುಣಮಟ್ಟವನ್ನು ಮೆಚ್ಚಿಕೊಂಡಿದ್ದಾರೆ. , ‘ರಾಮಾಯಣ’ ಸಿನಿಮಾವನ್ನು ಹಾಲಿವುಡ್‌ನ ಜನಪ್ರಿಯ ‘ಲಾರ್ಡ್ ಆಫ್ ದಿ ರಿಂಗ್ಸ್’ ಸರಣಿಗೂ ಹೋಲಿಕೆ ಮಾಡಿದ್ದಾರೆ. ಈ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಅಮೆರಿಕದಲ್ಲಿ ಚಿತ್ರದ ಮುಂಗಡ ಬುಕಿಂಗ್  ಹೆಚ್ಚಾಗಿದೆ.

ಅಮೆರಿಕದಲ್ಲಿ ‘ರಾಮಾಯಣ’ ಚಿತ್ರದ ಟಿಕೆಟ್ ದರವನ್ನು ಉದ್ದೇಶಪೂರ್ವಕವಾಗಿ ಕಡಿಮೆ ನಿಗದಿಪಡಿಸಲಾಗಿದೆ. ಅಕ್ಟೋಬರ್ 30ರಂದು ಬಿಡುಗಡೆಯಾದ ತೆಲುಗಿನ ‘ಆದರ್ಶ ಕುಟುಂಬಂ 47’ ಸಿನಿಮಾದ ಟಿಕೆಟ್ ದರಕ್ಕಿಂತಲೂ  ‘ರಾಮಾಯಣ’ ಚಿತ್ರದ ಟಿಕೆಟ್ ದರ ಕಡಿಮೆ ಇದೆ. ವಿದೇಶಗಳಲ್ಲಿ ಭಾರತೀಯ ಪ್ರೇಕ್ಷಕರಿಗೆ ಸಿನಿಮಾ ಸುಲಭವಾಗಿ ತಲುಪಬೇಕು ಎಂಬ ಉದ್ದೇಶದಿಂದ ಈ ಬೆಲೆ ತಂತ್ರ ಅನುಸರಿಸಲಾಗಿದೆ.  ವಿಶೇಷ ಪ್ರದರ್ಶನದ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಕಡಿಮೆ ಟಿಕೆಟ್ ದರ ಎರಡೂ ಸೇರಿ ಅಮೆರಿಕದಲ್ಲಿ ಚಿತ್ರದ ಬೇಡಿಕೆಯನ್ನು ಹೆಚ್ಚಿಸಿವೆ.

ನಮಿತ್ ಮಲ್ಹೋತ್ರಾ ನಿರ್ಮಾಣದ  ‘ರಾಮಾಯಣ’  ಸಿನಿಮಾ ನವೆಂಬರ್ 5ರಂದು ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!