ಅಯೋಗ್ಯ

Movie Review: ಎಲ್ಲರ ಮನ ಗೆದ್ದೇ ಬಿಡುವ ಬುದ್ಧಿವಂತ ಸಿದ್ದೇಗೌಡ

ಚಿತ್ರ: ಅಯೋಗ್ಯ 2
ನಿರ್ದೇಶನ: ಮಹೇಶ್ ಕುಮಾರ್
ನಿರ್ಮಾಣ: ಎಮ್.ಮುನೇಗೌಡ
ತಾರಾಗಣ: ನೀನಾಸಂ ಸತೀಶ್, ರಚಿತಾ ರಾಮ್, ರವಿಚಂದ್ರನ್, ರವಿಶಂಕರ್ ಮೊದಲಾದವರು…
ರೇಟಿಂಗ್ : 4/5

ಅಯೋಗ್ಯ ಚಿತ್ರ ಯಶಸ್ವಿಯಾಗಲು ಅದರ ಹಾಡು ಪ್ರಮುಖ ಕಾರಣವಾಗಿತ್ತು. ಉಳಿದಂತೆ ಮಂಡ್ಯ ಭಾಷೆ ಮತ್ತು ರವಿಶಂಕರ್ ಮತ್ತು ನೀನಾಸಂ ಸತೀಶ್ ಕಾಂಬಿನೇಶನ್ ದೃಶ್ಯಗಳು ಚೆನ್ನಾಗಿ ವರ್ಕೌಟ್ ಆಗಿದ್ದವು. ಅದೇ ತಂಡ ಎರಡನೇ ಭಾಗದಲ್ಲಿ ಮತ್ತೆ ಅವೆಲ್ಲವನ್ನು ನೆನಪಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಯೋಗ್ಯ ಚಿತ್ರ ಎಲ್ಲಿಗೆ ಕೊನೆಯಾಗಿತ್ತೋ ಅಲ್ಲಿಂದಲೇ ಅಯೋಗ್ಯ 2 ಚಿತ್ರ ಶುರುವಾಗುತ್ತದೆ. ಮೊದಲ ಭಾಗದ ಕಥೆಯನ್ನು ಸಿಂಹದ ಮೂಲಕ ತನ್ನ ಮರಿಗಳಿಗೆ ಹೇಳುವ ಮೊದಲ ದೃಶ್ಯದಿಂದ ಹಿಡಿದು ಕೊನೆಯ ತನಕ ಮಹೇಶ್ ಕುಮಾರ್ ನಿರ್ದೇಶನದಲ್ಲಿ ಹೊಸತನವಿದೆ.

ಅಯೋಗ್ಯನೆಂದೇ ಹೆಸರಾದ ಸಿದ್ದೇಗೌಡ ಮದುವೆಯಾದ ಬಳಿಕ ಕೂಡ ಜವಾಬ್ದಾರಿ ಪ್ರದರ್ಶಿಸುವುದಿಲ್ಲ. ಇದೇ ಕಾರಣಕ್ಕೆ ಪತ್ನಿ ನಂದಿನಿ ಮನೆ ಬಿಟ್ಟು ಪಿ.ಜಿ ಸೇರುತ್ತಾಳೆ. ಇತ್ತ ಕಡೆ ಪಂಚಾಯತ್ ಸದಸ್ಯನಾದ ಸಿದ್ದೇಗೌಡ ಪಂಚಾಯತ್ ಅಧ್ಯಕ್ಷನಾಗಲು ಪಟ್ಟು ಹಿಡಿಯುತ್ತಾನೆ. ಸಿದ್ದೇಗೌಡನ ಪ್ರಯತ್ನ ಯಶಸ್ವಿಯಾಗುತ್ತಾ? ನಂದಿನಿ ಮರಳಿ ಸಿದ್ದೇಗೌಡನ ಮನೆಗೆ ಬರುತ್ತಾಳ? ಎನ್ನುವುದೇ ಈ ಚಿತ್ರದ ಮುಖ್ಯಕಥೆ.

ಸಿದ್ದೇಗೌಡನಾಗಿ ನೀನಾಸಂ ಸತೀಶ್ ಗೆದ್ದೇಗೌಡನಾಗಿದ್ದಾರೆ. ನಂದಿನಿಯಾಗಿ ರಚಿತಾ ರಾಮ್ ಚಿತ್ರದ ಎರಡನೇ ಭಾಗವನ್ನು ಆಳಿದ್ದಾರೆ. ಇವಲ್ಲದೆ ಈ ಬಾರಿ ಚಿತ್ರದಲ್ಲಿ ಹಲವಾರು ಸರ್ಪ್ರೈಸ್ ಅಂಶಗಳಿವೆ. ಅವುಗಳಲ್ಲಿ ರವಿಚಂದ್ರನ್ ಅವರ ಎಂಟ್ರಿ ಕೂಡ ಪ್ರಮುಖ‌ ಅಂಶ. ಕ್ರೇಜಿಸ್ಟಾರ್ ಮಾತ್ರವಲ್ಲದೆ ದೇವರಾಜ್ ಕೂಡ ಒಂದು ವಿಶೇಷ ಪಾತ್ರ ನಿಭಾಯಿಸಿದ್ದಾರೆ. ಸಾಧುಕೋಕಿಲ ಅವರು ಮೊದಲ ಭಾಗಕ್ಕಿಂತ ವಿಭಿನ್ನವಾದ ಪಾತ್ರ ಮಾಡಿದ್ದಾರೆ. ಅದನ್ನು ಥಿಯೇಟರ್ ನಲ್ಲಿ ನೋಡಿ ಎಂಜಾಯ್ ಮಾಡಬಹುದು. ಅರ್ಜುನ್ ಸಂಗೀತ ಹಾಡುಗಳು ಮತ್ತು ನಾಯಕನ ಆ್ಯಕ್ಷನ್ ದೃಶ್ಯಗಳು ಮನದಲ್ಲಿ ಸ್ಥಾನ ಪಡೆಯುತ್ತವೆ. ಮನರಂಜನೆಗಾಗಿ ಸಿನಿಮಾ ನೋಡುವವರ ಮೊದಲ ಆದ್ಯತೆ ಅಯೋಗ್ಯ 2 ಆಗುವುದರಲ್ಲಿ ಎರಡು ಮಾತಿಲ್ಲ.

ಅಯೋಗ್ಯ

Be the first to comment

Leave a Reply

Your email address will not be published. Required fields are marked *

Translate »
error: Content is protected !!