ಸೂರ್ಯ ಹಾಗೂ ತ್ರಿಶಾ ಕೃಷ್ಣನ್ ಅಭಿನಯದ ಬಹುನಿರೀಕ್ಷಿತ ‘ಕರುಪ್ಪ್’ ಸಿನಿಮಾಗೆ ಮುಖ್ಯಮಂತ್ರಿ ವಿಜಯ್ ವಿಶೇಷ ಅನುಮತಿ ನೀಡುವ ಮೂಲಕ ತಮ್ಮ ಆಪ್ತ ಗೆಳತಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ.
ಮೇ 14ರಂದು ಬಿಡುಗಡೆಯಾಗುತ್ತಿರುವ ‘ಕರುಪ್ಪ್’ ಚಿತ್ರಕ್ಕೆ ಬೆಳಿಗ್ಗೆ 9 ಗಂಟೆಯ ಫಸ್ಟ್ ಶೋ ಪ್ರದರ್ಶನಕ್ಕೆ ಸರ್ಕಾರದಿಂದ ವಿಶೇಷ ಅನುಮತಿ ನೀಡಲಾಗಿದೆ. ದಿನಕ್ಕೆ ಐದು ಪ್ರದರ್ಶನಗಳನ್ನು ನಡೆಸಲು ಸರಕಾರದಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಬೆಳಿಗ್ಗೆ 9 ಗಂಟೆಗೂ ಮುನ್ನ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ. ಫಸ್ಟ್ ಡೇ ಫಸ್ಟ್ ಶೋ ವೇಳೆ ಅಭಿಮಾನಿಗಳ ಅಬ್ಬರ, ಟ್ರಾಫಿಕ್ ಸಮಸ್ಯೆ ಹಾಗೂ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಈ ನಿಯಮ ಜಾರಿಯಲ್ಲಿದೆ. ಆದರೆ ತ್ರಿಶಾ ಮತ್ತು ವಿಜಯ್ ನಡುವಿನ ಆಪ್ತತೆಯ ಗಾಸಿಪ್‌ಗಳು ಹರಿದಾಡುತ್ತಿರುವ ವೇಳೆ ಸಿನಿಮಾಗೆ ಅನುಮತಿ ಸಿಕ್ಕಿರುವುದು ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ‘ಕರುಪ್ಪ್’ ಚಿತ್ರತಂಡ ಪೋಸ್ಟ್ ಹಂಚಿಕೊಂಡಿದ್ದು, ಬೆಳಿಗ್ಗೆ 9 ಗಂಟೆಯ ಶೋಗೆ ಅನುಮತಿ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದೆ. ಶೋ ಸಮಯದಲ್ಲಿ ಅಭಿಮಾನಿಗಳ ಜನದಟ್ಟಣೆ ನಿಯಂತ್ರಿಸುವ ಜವಾಬ್ದಾರಿಯನ್ನು ಚಿತ್ರಮಂದಿರದ ಮಾಲೀಕರಿಗೆ ವಹಿಸಲಾಗಿದೆ.
ಆರ್‌ಜೆ ಬಾಲಾಜಿ ನಿರ್ದೇಶನದ ಚಿತ್ರದಲ್ಲಿ ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
__





Be the first to comment