ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ತಮಿಳು ಸ್ಟಾರ್ ಅಜಿತ್ ಕುಮಾರ್ ಅಭಿನಯದ ಹೊಸ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕ ಅದಿಕ್ ರವಿಚಂದ್ರನ್ ಅವರ ಈ ಚಿತ್ರಕ್ಕೆ ‘ಡೇರ್ ಡೆವಿಲ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾದಲ್ಲಿ ಅಜಿತ್‌ಗೆ ಎದುರಾಗಿ ಯಾರು ವಿಲನ್ ಆಗಲಿದ್ದಾರೆ ಎಂಬ ಚರ್ಚೆ ಕೆಲವು ದಿನಗಳಿಂದ ನಡೆಯುತ್ತಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಜಿತ್ ಅವರ ಮ್ಯಾನೇಜರ್ ಸುರೇಶ್ ಚಂದ್ರ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಶಿವಣ್ಣ ಎಂಟ್ರಿ ಈಗ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ಮೂರು-ನಾಲ್ಕು ತಿಂಗಳ ಹಿಂದೆಯೇ ನಿರ್ದೇಶಕ ಅದಿಕ್ ರವಿಚಂದ್ರನ್, ಶಿವಣ್ಣ ಅವರನ್ನು ಭೇಟಿಯಾಗಿ ಕಥೆ ವಿವರಿಸಿದ್ದರು. ಕಥೆ ಕೇಳಿದ ತಕ್ಷಣ ಶಿವಣ್ಣ ಒಪ್ಪಿಗೆ ಸೂಚಿಸಿದ್ದರು. ಬಳಿಕ ಅಜಿತ್, ಶಿವಣ್ಣ ಅವರೊಂದಿಗೆ ಮಾತನಾಡಿದ್ದಾರೆ. ನವೆಂಬರ್ 17 ಅಥವಾ 18ರಿಂದ ಶಿವರಾಜ್‌ಕುಮಾರ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
‘ಚಿತ್ರದಲ್ಲಿ ‘ಕ್ತಿಶಾಲಿ ಹಾಗೂ ಪ್ರಮುಖ ಖಳನಾಯಕನ ಪಾತ್ರವಿದೆ. ಈ ಪಾತ್ರಕ್ಕಾಗಿ ಹಲವು ನಟರ ಹೆಸರುಗಳನ್ನು ಪರಿಶೀಲಿಸಲಾಗಿತ್ತು. ಅಜಿತ್ ಅವರಿಗೆ ಶಿವರಾಜ್‌ಕುಮಾರ್ ಅವರ ಮೇಲೆ ಅಪಾರ ಗೌರವವಿದ್ದು, ಈ ಪಾತ್ರಕ್ಕೆ ಶಿವಣ್ಣ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿ ಚಿತ್ರತಂಡ ಸಂಪರ್ಕಿಸಿತ್ತು’ ಎಂದು ಸುರೇಶ್ ಚಂದ್ರ ತಿಳಿಸಿದ್ದಾರೆ.
ಈಗಾಗಲೇ ಹೈದರಾಬಾದ್‌ನಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಪ್ರಭು, ಪಾರ್ಥಿಬನ್ ಮತ್ತು ಶ್ರೀಲೀಲಾ ಸೇರಿದಂತೆ ಹಲವು ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿಂದೆ ‘ಜೈಲರ್’, ‘ಕ್ಯಾಪ್ಟನ್ ಮಿಲ್ಲರ್’, ‘ಜೈಲರ್ 2’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ, ಈಗ ಅಜಿತ್ ಎದುರು ಖಳನಾಯಕನಾಗಿ ನಟಿಸಲಿದ್ದಾರೆ.
—-





Be the first to comment