ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣ ಅವರು ಪತಿ ಹಾಗೂ ನಿರ್ದೇಶಕ ಕೃಷ್ಣ ವಂಶಿ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಪಾಡ್‌ಕಾಸ್ಟ್‌ವೊಂದರಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ ಕೃಷ್ಣ ಅವರು ಪತಿ ಕೃಷ್ಣ ವಂಶಿ ಅವರಿಂದ ವಿಚ್ಛೇದನ ಪಡೆದಿಲ್ಲ. ವೃತ್ತಿಪರ ಬದ್ಧತೆಗಳ ಕಾರಣ ಇಬ್ಬರೂ ಯಾವಾಗಲೂ ಒಂದೇ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಪ್ರತ್ಯೇಕ ನಗರಗಳಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ.
ರಮ್ಯಾ ಕೃಷ್ಣ ಚೆನ್ನೈನಲ್ಲಿ ವಾಸಿಸುತ್ತಿದ್ದರೆ, ಕೃಷ್ಣ ವಂಶಿ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ‘ನಾವು ಇಂದಿಗೂ ದಂಪತಿಗಳೇ. ನನ್ನ ಮಗ ಜನಿಸಿದ ಸಂದರ್ಭದಲ್ಲಿ ನಾನು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. 15 ದಿನಗಳಿಗೆ ಒಮ್ಮೆ ಚೆನ್ನೆನಿಂದ ಹೈದರಾಬಾದ್‌ಗೆ ಟ್ರಾವೆಲ್ ಮಾಡುತ್ತಿದ್ದೆ. ನಾನು ಆ ರೀತಿ ವಾಪಸ್ ಹೋದ ಪ್ರತಿ ಬಾರಿಯೂ ಮಗನಿಗೆ ಅನಾರೋಗ್ಯ ಎದುರಾಗುತ್ತಿತ್ತು. ನಾನು ಕೃಷ್ಣ ವಂಶಿಯೊಂದಿಗೆ ಮಾತನಾಡಿ ಆತನನ್ನು ಚೆನ್ನೈನಲ್ಲೇ ಬಿಟ್ಟು ಬಿಡಲು ತೀರ್ಮಾನ ಮಾಡಿದ್ದೆ’ ಎಂದು ರಮ್ಯಾ ಕೃಷ್ಣ ತಿಳಿಸಿದ್ದಾರೆ.
‘ಇದರಿಂದ ನಮ್ಮಿಬ್ಬರಿಗೂ ಅನುಕೂಲ ಆಗಿತ್ತು. ಅವರು ಕ್ರಿಯೇಟಿವ್ ಆಗಿ ಯೋಚನೆ ಮಾಡಿ ಪ್ರತಿದಿನ ಜಗಳ ಮಾಡುವ ಬದಲು ನಾವು ಒಳ್ಳೆಯ ಸ್ನೇಹಿತರಂತೆ ಇರೋಣ ಅಂತ ಹೇಳಿದ್ದರು. ಈ ಕಾರಣದಿಂದಲೇ ನಾವು ಇಂದಿಗ ದಂಪತಿಗಳಾಗಿಯೇ ಉಳಿದುಕೊಂಡಿದ್ದೇವೆ’ ಎಂದು ಹೇಳಿದ್ದಾರೆ.
‘ಅಗತ್ಯ ಎನಿಸಿದರೆ ಮಾತ್ರ ನಾವು ಮದುವೆಯಾಗಬೇಕು. ಮದುವೆ ಅನ್ನೋದು ಎರಡು ಕುಟುಂಬಗಳೊಂದಿಗೆ, ನಮ್ಮ ಸುತ್ತಲು ಇರುವ ಹಲವರೊಂದಿಗೆ ಸಂಬಂಧ ಹೊಂದಿರುತ್ತದೆ. ನಮ್ಮ ಸಂಗಾತಿಗಿಂತಲೂ ಸುತ್ತಲು ಇರುವ ಹಲವರಿಗೆ ನಾವು ಜವಾಬ್ದಾರಿಯಾಗಿ ಇರಕಾಗುತ್ತದೆ. ಕೃಷ್ಣವಂಶಿ ಮದುವೆ ಏಕೆ? ಲಿವಿಂಗ್ ಟುಗೆದರ್ ಇರೋಣ ಅಂತ ಹೇಳಿದ್ದರು. ಆಗಲೇ ನಾನು ‘ಯೆಸ್’ ಎಂದು ಹೇಳಿಬೇಕಿತ್ತು ಅಂತ ಈಗ ಅನಿಸುತ್ತಿದೆ’ ಎಂದು ತಿಳಿಸಿದ್ದಾರೆ.
‘ಕೃಷ್ಣವಂಶಿಯೊಂದಿಗೆ ನನ್ನ ರಿಲೇಷನ್ಶಿಪ್ ಉತ್ತಮವಾಗಿದೆ. ಎಂದಿಗೂ ಅದು ಅದೇ ರೀತಿ ಇರುತ್ತದೆ. ಅವರಿಗೆ ಸಿನಿಮಾನೇ ಪ್ರಪಂಚ. ನಾನು ಅವರ ವರ್ಕ್‌ಗೆ ತಲೆ ಹಾಕುವುದಿಲ್ಲ. ಅವರು ನನ್ನ ಸಿನಿಮಾ ವರ್ಕ್‌ಗೆ ತಲೆ ಹಾಕುವುದಿಲ್ಲ’ ಎಂದು ಹೇಳಿದ್ದಾರೆ.
—–





Be the first to comment