ವಿಜಯ್ ಐಷಾರಾಮಿ ಬಂಗಲೆ ವೈರಲ್

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಹಾದಿಯಲ್ಲಿ ಸಾಗಿರುವ ನಟ ವಿಜಯ್ ಅವರ ಐಷಾರಾಮಿ ಬಂಗಲೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚೆನ್ನೈನ ನೀಲಕಾರೈ ಸಮುದ್ರ ತೀರದಲ್ಲಿ ನಿರ್ಮಾಣವಾಗಿರುವ ವಿಜಯ್ ಅವರ ಬಂಗಲೆ ಹಾಲಿವುಡ್ ಶೈಲಿಯ ವಿನ್ಯಾಸ ಹೊಂದಿದೆ. ಈ ಬಂಗಲೆಯ ನಿರ್ಮಾಣಕ್ಕೆ ಹಾಲಿವುಡ್ ನಟ ಟಾಮ್ ಕ್ರ್ಯೂಸ್ ಅವರ ಬೀಚ್ ಸೈಡ್ ಮನೆ ಸ್ಫೂರ್ತಿ ಎನ್ನಲಾಗುತ್ತಿದೆ. ಇದರ ಮೌಲ್ಯ ಅಂದಾಜು 80 ಕೋಟಿ ರೂಪಾಯಿ ಆಗಿದೆ.

ಅಮೆರಿಕ ಪ್ರವಾಸದ ವೇಳೆ ಟಾಮ್ ಕ್ರ್ಯೂಸ್ ಅವರ ಮನೆ ಕಂಡು ಮೆಚ್ಚಿದ್ದ ವಿಜಯ್, ಅದೇ ಮಾದರಿಯಲ್ಲಿ ತಮ್ಮ ಕನಸಿನ ಮನೆಯನ್ನು ಕಟ್ಟಿಸಿದ್ದಾರೆ. ಆಧುನಿಕ ವಿನ್ಯಾಸ, ಸಮುದ್ರದ ನೋಟ ಮತ್ತು ಐಷಾರಾಮಿ ಸೌಲಭ್ಯಗಳಿಂದ ಇದು ಕೂಡಿದೆ.

ಕೆಲ ದಶಕಗಳಿಂದ ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ ವಿಜಯ್ ಅವರ ಈ ಬಂಗಲೆಗೆ ಕೆಲ ವರ್ಷಗಳ ಹಿಂದೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಆಗ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು.

ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ವಿಜಯ್ ನಟನೆಯ ಕೊನೆಯ ಚಿತ್ರ, ಎಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ ಚಿತ್ರ ಬಿಡುಗಡೆ ಆಗಬೇಕಿದೆ. ಇದು ಸೂಪರ್ ಹಿಟ್ ಆಗುವ ಸಾಧ್ಯತೆ ಹೆಚ್ಚಿದೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!