ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ನಟ ವಿಜಯ್ ಅವರ ಲವ್ ಸ್ಟೋರಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಮೂಲತಃ ಶ್ರೀಲಂಕಾ ಮೂಲದ ಉದ್ಯಮಿಯ ಪುತ್ರಿ ಆಗಿದ್ದಾರೆ. ಲಂಡನ್ನಲ್ಲಿ ಬೆಳೆದ ಸಂಗೀತಾ 1996ರಲ್ಲಿ ಬಿಡುಗಡೆಯಾದ ವಿಜಯ್ ನಟನೆಯ ‘ಪೂವೆ ಉನಕ್ಕಾಗ’ ಸಿನಿಮಾ ನೋಡಿ ಅವರ ಅಭಿಮಾನಿಯಾಗಿದ್ದರು. ಸಿನಿಮಾ ಮೆಚ್ಚಿ ಯಾರಿಗೂ ತಿಳಿಯದಂತೆ ಭಾರತಕ್ಕೆ ಬಂದು ವಿಜಯ್ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದರು.
ಲಂಡನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಸಂಗೀತಾ ಅವರು ವಿಜಯ್ಗೆ ನಿರಂತರವಾಗಿ ಪತ್ರಗಳನ್ನು ಬರೆಯಲು ಆರಂಭಿಸಿದ್ದರು. ಈ ಪರಿಚಯ ಪ್ರೀತಿಗೆ ತಿರುಗಿ ಕೊನೆಗೆ ವಿಜಯ್ ಜೊತೆಗೆ ಮದುವೆಯಾಗಿ ದಾಂಪತ್ಯ ಜೀವನ ಆರಂಭಿಸಿದ್ದರು.
ಈ ಜೋಡಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ವಿಜಯ್ ಪುತ್ರ ಚಿತ್ರ ನಿರ್ದೇಶಕರಾಗಿ ಎಂಟ್ರಿ ಕೊಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸುಮಾರು ಎರಡು ದಶಕಗಳ ದಾಂಪತ್ಯದ ಬಳಿಕ ವಿಜಯ್ ಮತ್ತು ಸಂಗೀತಾ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಚುನಾವಣೆಗೆ ಮುನ್ನವೇ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸುದ್ದಿ ತಮಿಳು ರಾಜಕೀಯ ಮತ್ತು ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಜಯ್ ಅವರ ಹೆಸರು ನಟಿ ತ್ರಿಷಾ ಜೊತೆಗೆ ಈಗ ತಳುಕು ಹಾಕಿಕೊಂಡಿದೆ.





Be the first to comment