ಡ್ರ್ಯಾಗನ್’ಗೆ ಪ್ರಕಾಶ್ ರಾಜ್ ಎಂಟ್ರಿ

ಜೂ. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ‘ಡ್ರ್ಯಾಗನ್’ ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಸೇರ್ಪಡೆ ಆಗಿದ್ದಾರೆ.

ಸಿನಿಮಾದಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಕಾಶ್ ರಾಜ್ ಎಂಟ್ರಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅವರು ಪವರ್‌ಫುಲ್ ಪಾತ್ರವೊಂದರಲ್ಲಿ ನಟಿಸಲಿದ್ದು, ಅವರು ಗಂಭೀರ ಅಭಿನಯದ ಮೂಲಕ ತೆರೆ ಮೇಲೆ ಅಬ್ಬರಿಸುವ ಸಾಧ್ಯತೆ ಇದೆ.

ಪ್ರಕಾಶ್ ರಾಜ್, ಜೂ. ಎನ್‌ಟಿಆರ್ ಜೋಡಿ ಈಗಾಗಲೇ ‘ಸಾಂಬಾ’, ‘ಅಶೋಕ್’, ‘ಊಸರವಲ್ಲಿ’, ‘ಟೆಂಪರ್’, ‘ಬೃಂದಾವನಂ’ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದೆ. ‘ಟೆಂಪರ್’ ಸಿನಿಮಾದ ಇವರಿಬ್ಬರ ಕಾಂಬಿನೇಷನ್ ಭಾರೀ ಮೆಚ್ಚುಗೆ ಪಡೆದಿತ್ತು. ಈಗ ‘ಡ್ರ್ಯಾಗನ್’ ಸಿನಿಮಾದ ಮೂಲಕ ಕುತೂಹಲ ಮೂಡಿದೆ.ಮಲಯಾಳಂ ನಟ ಟೊವಿನೋ ಥಾಮಸ್‌ಗೆ ಸಿನಿಮಾದ ಆಫರ್ ನೀಡಲಾಗಿತ್ತು. ಅವರು ಸಿನಿಮಾ ತಿರಸ್ಕರಿಸಿದ್ದಾರೆ. ಅವರ ಬೆನ್ನಲ್ಲೇ ಪ್ರಕಾಶ್ ರಾಜ್ ಎಂಟ್ರಿ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.

ಪ್ರಶಾಂತ್ ನೀಲ್ ವಿಭಿನ್ನ ಭಾಷೆಗಳ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಪ್ಯಾನ್ ಇಂಡಿಯಾ ಮ್ಯಾಜಿಕ್ ಸೃಷ್ಟಿ ಮಾಡಿದ್ದಾರೆ. ಈಗ ‘ಕೆಜಿಎಫ್’ ಮತ್ತು ‘ಸಲಾರ್’ ಬಳಿಕ ಜೂ.ಎನ್‌ಟಿಆರ್ ಸಿನಿಮಾದಲ್ಲಿ ಕನ್ನಡದ ಪ್ರಮುಖ ಕಲಾವಿದರಿಗೆ ಅವಕಾಶ ನೀಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!