ಸ್ಯಾಂಡಲ್‌ವುಡ್ ಮೌನಕ್ಕೆ ಸಾಧುಕೋಕಿಲ ಅಸಮಾಧಾನ

‘ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ನೀಟ್ ಹೋರಾಟದಲ್ಲಿ  ಸ್ಯಾಂಡಲ್‌ವುಡ್ ಒಂದಾಗಿ ನಿಲ್ಲಬೇಕಿತ್ತು’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮಹತ್ವದ ವಿಚಾರಗಳಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಪ್ರತಿಕ್ರಿಯಿಸುತ್ತಿದ್ದಾರೆ. ಚಿತ್ರರಂಗದ ಬಹುತೇಕ ಕಲಾವಿದರು ಮೌನ ವಹಿಸಿರುವುದು ಸರಿಯಾದ ನಡೆ ಅಲ್ಲ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಸಾಮಾಜಿಕ ಅಥವಾ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕ ಕಾಮೆಂಟ್‌ಗಳು ಬರುತ್ತವೆ ಎಂಬ ಆತಂಕದಿಂದ ಅನೇಕರು ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರ ವಿರುದ್ಧ ಆಧಾರ ರಹಿತ ಆರೋಪಗಳು , ಅಪಪ್ರಚಾರಗಳನ್ನೂ ಮಾಡಲಾಗುತ್ತಿದೆ. ಸಮಾಜದ ಪರವಾಗಿ ಚಿತ್ರರಂಗ ಧ್ವನಿ ಎತ್ತಿದರೆ ಅದರ ಪರಿಣಾಮ ಹೆಚ್ಚು ಆಗುತ್ತದೆ . ಮೇಕೆದಾಟು ಯೋಜನೆ ವಿಚಾರದಲ್ಲಿಯೂ ಚಿತ್ರರಂಗದಿಂದ ನಿರೀಕ್ಷಿತ ಮಟ್ಟದ ಬೆಂಬಲ ದೊರೆಯಲಿಲ್ಲ’ ಎಂದು ಹೇಳಿದರು.

‘ ರಾಜ್ಯದ ಹಿತಾಸಕ್ತಿ ಮತ್ತು ಜನರ ಸಮಸ್ಯೆಗಳ ವಿಚಾರದಲ್ಲಿ ಕಲಾವಿದರು ಒಗ್ಗಟ್ಟಿನಿಂದ ಮುಂದೆ ಬರಬೇಕು. ಸಾಮಾಜಿಕ ಜವಾಬ್ದಾರಿಯ ವಿಚಾರದಲ್ಲಿ ಚಿತ್ರರಂಗ ಮತ್ತಷ್ಟು ಸಕ್ರಿಯವಾಗಿ ಭಾಗವಹಿಸಬೇಕು. ಜನಪರ ವಿಷಯಗಳಲ್ಲಿ ಮೌನ ವಹಿಸುವ ಬದಲು ಸ್ಪಷ್ಟ ನಿಲುವು ಪ್ರಕಟಿಸುವುದು ಅಗತ್ಯವಾಗಿದೆ ಎಂದು  ಹೇಳಿದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!