‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಲಿರಿಕಲ್ ಹಾಡು ರಿಲೀಸ್‌

ಪ್ರತೀತ್ ಅಕ್ಕಿ ನಿರ್ಮಿಸಿರುವ  ಕಾಮಿಡಿ ಥ್ರಿಲ್ಲರ್ ಡ್ರಾಮಾ ಸಿನಿಮಾ ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ಯ ‘ಕಳ್ಳೇ ಬೀಜ ಕಿತ್ತುಕೊಂಡ್ ಹೋದ್ಲು’   ಲಿರಿಕಲ್ ವಿಡಿಯೋ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ  ಸದ್ದು ಮಾಡುತ್ತಿದೆ.

ಹಾಡಿಗೆ ಗಾಯಕ ದಿವ್ಯ ಕುಮಾರ್ ಧ್ವನಿಯಾಗಿದ್ದಾರೆ. ರಾಘವೇಂದ್ರ ವಿ. ಅವರ ಆಕರ್ಷಕ ಸಂಗೀತ ಸಂಯೋಜನೆ ಕೇಳುಗರನ್ನು ಗುನುಗುವಂತೆ ಮಾಡಿದೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಅಭಿನಂದನ್ ದೇಶಪ್ರಿಯ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಭೂಷಣ್ ಅವರ ನೃತ್ಯ ನಿರ್ದೇಶನ ಮತ್ತು ಉಜ್ವಲ್ ಚಂದ್ರ ಅವರ ಸಂಕಲನ ಹಾಡಿನ ದೃಶ್ಯ ಶ್ರೀಮಂತಿಕೆಯನ್ನು ಹೆಚ್ಚಿಸಿದೆ.

ಚಿತ್ರದಲ್ಲಿ ಯುವನ್ ಹಣಕೋಡ್, ಅರ್ಜುನ್ ವೇದಾಂತ ಜೊತೆಗೆ ರಕ್ಷಿತಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹಿರಿಯ ನಟ ದತ್ತಣ್ಣ, ವಿಜಯ್ ಚಂಡೂರ್, ನವೀಂದ್ರ, ಅನಿಲ್ ಸಿದ್ದು, ನಾಗರಾಜ್ ಮೂರ್ತಿ, ಮಿಮಿಕ್ರಿ ಗೋಪಿ, ಮನ್‌ದೀಪ್ ರಾಯ್, ಪ್ರಶಾಂತ್ ವೈ.ಎನ್ ಮತ್ತು ವಿ. ರವಿ ಶಂಕರ್ ನಾಗ್ ಸೇರಿದಂತೆ ದೊಡ್ಡ ತಾರಾಗಣ  ಅಭಿನಯಿಸಿದೆ.

ಚಿತ್ರತಂಡ ಈಗಾಗಲೇ ಬೆಂಗಳೂರು, ಸಕಲೇಶಪುರ, ಮಡಿಕೇರಿ ಮತ್ತು ಹೊನ್ನಾವರದ ನಯನಮನೋಹರ ತಾಣಗಳಲ್ಲಿ ಚಿತ್ರೀಕರಣ  ಪೂರ್ಣಗೊಳಿಸಿದೆ. ಚೇತನ್ ರಾವ್ ಅವರ ಹಿನ್ನೆಲೆ ಸಂಗೀತ, ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಸದ್ಯ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

ಚಿತ್ರತಂಡ  ಶೀಘ್ರದಲ್ಲೇ ಸಿನಿಮಾವನ್ನು ರಿಲೀಸ್ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!