ಬರಗೂರು ರಾಮಚಂದ್ರಪ್ಪ ನಿರ್ದೇಶನ ಮಾಡಿರುವ ‘ಮಹಾಕವಿ’ ಸಿನಿಮಾ ಸೆ. 18 ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರದಲ್ಲಿ ಬಹುಭಾಷಾ ಕಲಾವಿದ ಕಿಶೋರ್ ಕುಮಾರ್, ಅನುಷಾ ರೈ, ಸುಂದರರಾಜ್, ಪ್ರಮೀಳಾ ಜೋಷಾಯ್, ಕುಮಾರ್ ಗೊವಿಂದ್, ಶೀಲಾ, ಆಕಾಂಕ್ಷ್ ಬರಗೂರ್, ಸುಂದರರಾಜ ಅರಸು, ರಾಜಪ್ಪ ದಳವಾಯಿ, ರಾಘವ್, ವತ್ಸಲಾ ಮೋಹನ್ ಮುಂತಾದವರು ಅಭಿನಯಿಸಿದ್ದಾರೆ.
ಬರಗೂರು ರಾಮಚಂದ್ರಪ್ಪ ಚಿತ್ರಕತೆ, ಗೀತೆ, ಸಂಭಾಷಣೆಗಳನ್ನು ರಚಿಸಿ ನಿರ್ದೇಶನ ಮಾಡಿದ್ದಾರೆ. ಇದು ಬರಗೂರು ರಾಮಚಂದ್ರಪ್ಪನವರ ನಿರ್ದೇಶನದ 25ನೇ ಸಿನಿಮಾ ಎನ್ನುವುದು ವಿಶೇಷ.
‘ಮಹಾಕವಿ’ ಸಿನಿಮಾವನ್ನು ಆದಿಕವಿ ಪಂಪನ ಎರಡು ಕಾವ್ಯಗಳನ್ನು ಆಧರಿಸಿ ಚಿತ್ರಿಸಲಾಗಿದೆ. ಪಂಪ ಮಹಾಕವಿಯ ಜೀವನ ಮತ್ತು ಆಶಯಗಳನ್ನು ಅಳವಡಿಸಲಾಗಿದೆ. ‘ಆದಿಪುರಾಣ’ದ ಭರತ-ಬಾಹುಬಲಿ ಪ್ರಸಂಗ ಮತ್ತು ‘ವಿಕ್ರಮಾರ್ಜುನ ವಿಜಯಂ’ನ ಕರ್ಣನ ಸನ್ನಿವೇಶಗಳನ್ನು ಪ್ರಮುಖವಾಗಿ ತೋರಿಸಲಾಗಿದೆ. ಪಂಪನ ಕೆಲವು ಪದ್ಯಗಳನ್ನು ಅಳವಡಿಸಲಾಗಿದೆ. ನಾಡಿನ ಹೆಮ್ಮೆಯಾದ ‘ಕನ್ನಡ ಸಾಹಿತ್ಯ ಸಂಸ್ಕ0ತಿ’ಯನ್ನು ಬಿಂಬಿಸುವ ಅಪರೂಪದ ಪ್ರಯತ್ನವನ್ನು ಈ ಸಿನಿಮಾದಲ್ಲಿ ಕಾಣಬಹುದು.
ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿದೇರ್ಶನ, ತ್ರಿಭುವನ್ ನೃತ್ಯ ಸಂಯೋಜನೆ, ಹೊಸ್ಮನೆ ಮೂರ್ತಿ ಕಲಾವಿನ್ಯಾಸ ಚಿತ್ರಕ್ಕಿವೆ.
———





Be the first to comment