Pikaso

‘ಪಿಕಾಸೊ’ ಫಸ್ಟ್ ಲುಕ್ ರಿಲೀಸ್‌

ಶಿವರಾಜ್‌ಕುಮಾರ್ ಮತ್ತು ಯೂಥ್‌ ಸೆನ್ಸೇಷನ್ ಅಭಿಶನ್ ಜೀವಿಂತ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಪಿಕಾಸೊ’  ಎಂದು ಹೆಸರಿಡಲಾಗಿದೆ.

ನಟ-ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್  ಅನಾವರಣಗೊಳಿಸಿದರು. ‘ಡ್ರಾಮಾ ಕಂಪನಿ’ ಅರ್ಪಿಸುವ ಈ ಚಿತ್ರದ ಮೂಲಕ ಗೌತಮ್ ಶಿವರಾಮನ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್ ತನ್ನ ಶೈಲಿಯಿಂದ ಗಮನ ಸೆಳೆಯುತ್ತದೆ.  ಶಿವರಾಜಕುಮಾರ್ ಮತ್ತು ಅಭಿಶನ್ ಜೀವಿಂತ್ ಇಬ್ಬರೂ ಬಿಳಿ ಉಡುಪಿನಲ್ಲಿ, ಸುಟ್ಟು ಹೋದ ಪಟಾಕಿಗಳ ನಡುವೆ ಕುಳಿತ ತಮಾಷೆಯ ಹಾಗೂ ಕೂಲ್ ಆದ ಭಂಗಿ ಪ್ರೇಕ್ಷಕರ ಕುತೂಹಲ ಕೆರಳಿಸಿದೆ.  ತಮಿಳು, ಕನ್ನಡದ ಜೊತೆಗೆ ವಿವಿಧ ಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

ಶಿವರಾಜಕುಮಾರ್ ತಮ್ಮ ನಟನೆಯ ಮೂಲಕ ಭಾಷೆಯ ಗಡಿ ಮೀರಿ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.  ‘ಟೂರಿಸ್ಟ್ ಫ್ಯಾಮಿಲಿ’ ನಿರ್ದೇಶನ ಹಾಗೂ ‘ವಿತ್ ಲವ್’ ಚಿತ್ರದ ನಟನೆಯ ಮೂಲಕ ಯುವ ಪ್ರೇಕ್ಷಕರ ಮನಗೆದ್ದಿರುವ ಅಭಿಶನ್ ಭರವಸೆಯ ಯುವ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಎರಡು ವಿಭಿನ್ನ ತಲೆಮಾರು ಮತ್ತು ಶೈಲಿಯ ನಟರನ್ನು ಒಂದೇ ವೇದಿಕೆಗೆ ತರುತ್ತಿರುವುದು ‘ಪಿಕಾಸೊ’ ಚಿತ್ರದ ಹೈಲೈಟ್‌ ಆಗಿದೆ.

ಚಿತ್ರಕ್ಕೆ ಗೌತಮ್ ಶಿವರಾಮನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಲಿಯೋನ್ ಜೇಮ್ಸ್ ಸಂಗೀತ ಸಂಯೋಜನೆ ಮತ್ತು ಪ್ರಗದೀಶ್ ಪ್ರಭು ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಸುರೇಶ್ ಅವರ ಸಂಕಲನ, ಸ್ವಾತಿ ರಾಮಕೃಷ್ಣನ್ ಅವರ ವಸ್ತ್ರವಿನ್ಯಾಸ ಹಾಗೂ ವಿಜು ವಿಜಯನ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.

ಚಿತ್ರದಲ್ಲಿ ಶಿವಾನಿ ನಗರಂ ನಾಯಕಿಯಾಗಿ ನಟಿಸುತ್ತಿದ್ದು, ಯೋಗಲಕ್ಷ್ಮಿ ಪ್ರಮುಖ ಪಾತ್ರದಲ್ಲಿದ್ದಾರೆ.  ಗಾಯಕ ಗಾನಾ ವಿನೋದ್ ಈ ಚಿತ್ರದ ಮೂಲಕ ನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಈ ಸಿನಿಮಾವನ್ನು ಎ. ಬಾಲಮುರುಗನ್ ನಿರ್ಮಿಸುತ್ತಿದ್ದು, ಆರ್. ಕಾರ್ತಿಕೇಯನ್, ದಿನೇಶ್ ಬಾಲಚಂದ್ರನ್ ಹಾಗೂ ಆರ್. ಆರ್. ದೀಪನ್ ರಾಜ್ ಸಹ-ನಿರ್ಮಾಪಕರಾಗಿದ್ದಾರೆ. ಗ್ರೀನ್ ಗಾಡ್ ಮತ್ತು ಡಿ ಪಿಕ್ಚರ್ಸ್ ಸಂಸ್ಥೆಗಳು ನಿರ್ಮಾಣದಲ್ಲಿ ಕೈಜೋಡಿಸಿವೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!