ತಲೈವಾ ಜೊತೆ ಮತ್ತೆ ತೆರೆ ಮೇಲೆ ನಯನತಾರಾ?

‘ಚಂದ್ರಮುಖಿ’ಯಲ್ಲಿ ಮೋಡಿ ಮಾಡಿದ್ದ ಸೂಪರ್‌ಹಿಟ್ ಜೋಡಿ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಲೇಡಿ ಸೂಪರ್‌ಸ್ಟಾರ್ ನಯನತಾರಾ  ಮತ್ತೊಮ್ಮೆ ಒಂದಾಗಲಿದೆ ಎಂಬ ಸುದ್ದಿ  ಭಾರೀ ಸದ್ದು ಮಾಡುತ್ತಿದೆ.

ರಜನಿಕಾಂತ್ ಅಭಿನಯದ ‘ಧರ್ಮನ್’ ಸಿನಿಮಾದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಿಮ್ರನ್, ರಾಶಿ ಖನ್ನಾ,  ಶ್ರೀಲೀಲಾ ಹೆಸರುಗಳು ಈ ಚಿತ್ರಕ್ಕೆ ಕೇಳಿ ಬಂದಿದ್ದು, ಇದೀಗ ನಯನತಾರಾ ಹೆಸರು  ಸೇರ್ಪಡೆಯಾಗಿದೆ.

ನಯನತಾರಾ ಪಾತ್ರ ಕೇವಲ ಅತಿಥಿ ಪಾತ್ರವಾಗಿರದೆ  ಸಿನಿಮಾದ ಕಥೆಗೆ ಪ್ರಮುಖ ತಿರುವು ನೀಡುವ ಪಾತ್ರವಾಗಿರಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ನಿರ್ದೇಶಕ ಅಶ್ವತ್ ಮಾರಿಮುತ್ತು  ತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಸಿನಿಮಾದಲ್ಲಿ ಕಾಮಿಡಿ, ಮನರಂಜನೆ ಹಾಗೂ ರಜನಿಕಾಂತ್ ಅವರ ಸ್ಟಾರ್ ಇಮೇಜ್‌ಗೆ ತಕ್ಕ ದೃಶ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಆದರೆ ನಯನತಾರಾ ಈ ಚಿತ್ರದಲ್ಲಿ ನಟಿಸುವ ಕುರಿತು ಚಿತ್ರತಂಡದಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

‘ಚಂದ್ರಮುಖಿ’ ಸಿನಿಮಾದಲ್ಲಿ ಈ ಜೋಡಿ ಮಾಡಿದ ಮೋಡಿ  ಬಳಿಕ ‘ಅಣ್ಣಾತ್ತೆ’ ಚಿತ್ರದಲ್ಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ‘ಚಂದ್ರಮುಖಿ’ ಜೋಡಿ ಮತ್ತೆ ಒಂದಾಗುತ್ತಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!