ಮುದ್ದಿನ ಪಾಳ್ಯದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಿತು. ಮುಹೂರ್ತದಲ್ಲಿ ಲವ್ಲೀ ಸ್ಟಾರ್ ಪ್ರೇಮ್ ಆರಂಭ ಫಲಕಕ್ಕೆ ಸಾಕ್ಷಿಯಾದರು. ಹಿರಿಯ ನಿರ್ದೇಶಕ ಎಸ್. ಮಹೇಂದರ್ ಕ್ಯಾಮೆರಾ ಚಾಲನೆ ನೀಡಿ ಚಿತ್ರಕ್ಕೆ ಶುಭ ಕೋರಿದರು.
ಡಾ.ವಿ.ನಾಗೇಂದ್ರ ಪ್ರಸಾದ್ ಈ ಬಾರಿ ನಿರ್ದೇಶನದ ಜೊತೆಗೆ ಶುಭಲಾಭ ಚಿತ್ರದ ಮೂಲಕ *ಪುತ್ರ ಉತ್ಸವ್ ಪ್ರಸಾದ್ ರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. ಹಿರಿಯ ನಟ ದತ್ತಣ್ಣ ಬಹು ಮುಖ್ಯಪಾತ್ರದಲ್ಲಿದ್ದಾರೆ .
ರಿಯಾ ಕಂಬೈನ್ಸ್ ಲಾಂಛನದ ಅಡಿಯಲ್ಲಿ ಶ್ರೀಮತಿ ಯಮುನಾ ಪ್ರಸಾದ್ ಈ ಚಿತ್ರ ನಿರ್ಮಿಸಿದ್ದಾರೆ. ವಿಜಯಾನಂದ್ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದು, ವಿ. ಹರಿಕೃಷ್ಣ ಸಂಗೀತ, ಸುರೇಶ್ ಅರಸುರವರ ಸಂಕಲನ ಹಾಗೂ ಉಪ್ಪಿ ಛಾಯಾಗ್ರಹಣ ಇದೆ.
ಶುಭಲಾಭ ಚಿತ್ರದ ಚಿತ್ರೀಕರಣ ಬಿಜಾಪುರ, ಬದಾಮಿ, ಸಿಂದಗಿ ಬಾಗಲಕೋಟೆ ಭಾಗದಲ್ಲಿ ನಡೆಯಲಿದ್ದು, ಸದ್ಯದಲ್ಲೇ ಚಿತ್ರೀಕರಣಕ್ಕೆ ಚಾಲನೆ ನೀಡುವ ಯೋಜನೆಯಲ್ಲಿ ಚಿತ್ರತಂಡ ಇದೆ.






Be the first to comment