ಇಂದಿರಾ

ಶಿವಾಜಿ ಸುರತ್ಕಲ್ ಚಿತ್ರ ನಿರ್ಮಾಪಕರಿಂದ ಹೊಸ ವೆಬ್ ಸರಣಿ

‘ಶಿವಾಜಿ ಸುರತ್ಕಲ್ 1 ಮತ್ತು 2’ ಚಿತ್ರಗಳ ನಿರ್ಮಾಪಕ ಅನೂಪ್ ಹನುಮಂತೇಗೌಡ ನಿರ್ಮಾಣದಲ್ಲಿ ‘ಇಂದಿರಾ’ ಎಂಬ ಹೊಸ ಕನ್ನಡ ವೆಬ್ ಸರಣಿ ಮೂಡಿಬರುತ್ತಿದೆ. ಇಂದಿನ ಕಾಲಘಟ್ಟ ಮತ್ತು 1970ರ ದಶಕದ ನಡುವೆ ಸಾಗುವ ಈ ಸರಣಿಯು, ಮೌನದ ಹಿಂದೆ ಹೂತುಹೋಗಿರುವ ಹಿಂಸೆಯ ಕಥೆಯನ್ನು ತೆರೆದಿಡಲಿದೆ. ಅನುಪಮಾ ಆನಂದ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮತ್ತೊಬ್ಬ ನಾಯಕಿಯ ಹೆಸರನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು. ಸರಣಿಗೆ ಕೆ. ಎಸ್. ಸುಂದರಮೂರ್ತಿ ಸಂಗೀತ ಸಂಯೋಜಿಸುತ್ತಿದ್ದು, ಸಿ. ರವಿಚಂದ್ರನ್ ಸಂಕಲನ, ಸಂಜಯ್ ಚನ್ನಪ್ಪ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ‘ಕಾಂತಾರ’ ಚಿತ್ರದಲ್ಲಿ ತಮ್ಮ ಕೆಲಸದ ಮೂಲಕ ಗುರುತಿಸಿಕೊಂಡಿರುವ ರಮೇಶ್ ಸಿ. ಪಿ. ಬಣ್ಣ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಸರಣಿಯು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ವಿಭಿನ್ನ ಕಥಾಹಂದರದೊಂದಿಗೆ ಮೂಡಿಬರುತ್ತಿರುವ ‘ಇಂದಿರಾ’ ಕನ್ನಡ ವೆಬ್ ಸರಣಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ಹಂಚಿಕೊಳ್ಳಲಿದೆ.*ಶಿವಾಜಿ ಸುರತ್ಕಲ್ 1 ಮತ್ತು 2 ಚಿತ್ರದ ನಿರ್ಮಾಪಕರಿಂದ ಮತ್ತೊಂದು ಹೊಸ ಪ್ರಯತ್ನ – ‘ಇಂದಿರಾ’ ಕನ್ನಡ ವೆಬ್ ಸರಣಿ*

‘ಶಿವಾಜಿ ಸುರತ್ಕಲ್ 1 ಮತ್ತು 2’ ಚಿತ್ರಗಳ ನಿರ್ಮಾಪಕ ಅನೂಪ್ ಹನುಮಂತೇಗೌಡ ನಿರ್ಮಾಣದಲ್ಲಿ ‘ಇಂದಿರಾ’ ಎಂಬ ಹೊಸ ಕನ್ನಡ ವೆಬ್ ಸರಣಿ ಮೂಡಿಬರುತ್ತಿದೆ. ಇಂದಿನ ಕಾಲಘಟ್ಟ ಮತ್ತು 1970ರ ದಶಕದ ನಡುವೆ ಸಾಗುವ ಈ ಸರಣಿಯು, ಮೌನದ ಹಿಂದೆ ಹೂತುಹೋಗಿರುವ ಹಿಂಸೆಯ ಕಥೆಯನ್ನು ತೆರೆದಿಡಲಿದೆ. ಅನುಪಮಾ ಆನಂದ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮತ್ತೊಬ್ಬ ನಾಯಕಿಯ ಹೆಸರನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು. ಸರಣಿಗೆ ಕೆ. ಎಸ್. ಸುಂದರಮೂರ್ತಿ ಸಂಗೀತ ಸಂಯೋಜಿಸುತ್ತಿದ್ದು, ಸಿ. ರವಿಚಂದ್ರನ್ ಸಂಕಲನ, ಸಂಜಯ್ ಚನ್ನಪ್ಪ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ‘ಕಾಂತಾರ’ ಚಿತ್ರದಲ್ಲಿ ತಮ್ಮ ಕೆಲಸದ ಮೂಲಕ ಗುರುತಿಸಿಕೊಂಡಿರುವ ರಮೇಶ್ ಸಿ. ಪಿ. ಬಣ್ಣ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಸರಣಿಯು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ವಿಭಿನ್ನ ಕಥಾಹಂದರದೊಂದಿಗೆ ಮೂಡಿಬರುತ್ತಿರುವ ‘ಇಂದಿರಾ’ ಕನ್ನಡ ವೆಬ್ ಸರಣಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ಹಂಚಿಕೊಳ್ಳಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!