ಇತಿಹಾಸ ಸೃಷ್ಟಿಸಿದ ‘ಪ್ರೇಮದ ಊರಲಿ’

‘ಪ್ರೇಮದ ಊರಲಿ’ ಸಿನಿಮಾ ಬಿಡುಗಡೆಯಾದ 26 ದಿನಗಳಲ್ಲಿ ವಿಶ್ವಾದ್ಯಂತ  100 ಕೋಟಿ ರೂಪಾಯಿ ಗಳಿಕೆಯ ಮೂಲಕ ಇತಿಹಾಸ ಸೃಷ್ಟಿಸಿದೆ.

2026ರ ಅತಿ ಹೆಚ್ಚು ನೆಟ್ ಗಳಿಕೆ ಮಾಡಿದ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಪ್ರೇಮದ ಊರಲಿ’ ಪಾತ್ರವಾಗಿದೆ.  ಕೇವಲ 2.5 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಬಂಡವಾಳಕ್ಕೆ ಹೋಲಿಸಿದರೆ ಸ್ಯಾಂಡಲ್‌ವುಡ್‌ನ ಅತ್ಯಂತ ಗರಿಷ್ಠ ಲಾಭ ತಂದುಕೊಟ್ಟ ಚಿತ್ರಗಳ ಸಾಲಿಗೆ ಸೇರಿದೆ. ಯಾವುದೇ ದೊಡ್ಡ ಸ್ಟಾರ್ ನಟ ಇಲ್ಲದೆ, ಕೇವಲ ಕಥೆಯ ಬಲದಿಂದ ಸ್ಯಾಂಡಲ್‌ವುಡ್‌ನಲ್ಲಿ ಈ ಮಟ್ಟದ ದಾಖಲೆ ಬರೆದಿರುವುದು ಇಡೀ ಚಿತ್ರರಂಗವೇ ಹೆಮ್ಮೆ ಪಡುವಂತೆ ಮಾಡಿದೆ.

ಕೆಜಿಎಫ್, ಕಾಂತಾರ, 777 ಚಾರ್ಲಿ, ವಿಕ್ರಾಂತ್ ರೋಣ ಚಿತ್ರಗಳ ತರುವಾಯ 100 ಕೋಟಿ ಮೈಲಿಗಲ್ಲು ದಾಟಿದ ಹೆಮ್ಮೆಯ ಕನ್ನಡ ಸಿನಿಮಾವಾಗಿ ‘ಪ್ರೇಮದ ಊರಲಿ’ ಹೊರಹೊಮ್ಮಿದೆ. ಬಿಡುಗಡೆಯಾದ ಮೊದಲ ದಿನ ಕೇವಲ 60 ಶೋಗಳು ಮತ್ತು  10 ಲಕ್ಷದ ಆರಂಭಿಕ ಕಲೆಕ್ಷನ್ನೊಂದಿಗೆ ತನ್ನ ಪಯಣ ಆರಂಭಿಸಿತ್ತು. ಆದರೆ ಪ್ರೇಕ್ಷಕರ  ಮೌಖಿಕ ಪ್ರಚಾರದಿಂದಾಗಿ ಎರಡೇ ವಾರಗಳಲ್ಲಿ ಚಿತ್ರದ ಶೋಗಳ ಸಂಖ್ಯೆ 1,200ಕ್ಕೂ ಅಧಿಕವಾಗಿತ್ತು. ಕೇವಲ 26 ದಿನಗಳಲ್ಲಿ ವಿಶ್ವದಾದ್ಯಂತ  ಸದ್ಯ  107.67 ಕೋಟಿ ರೂಪಾಯಿ ಗಳಿಕೆಯ  ಸಾಧನೆ ಮಾಡಿದೆ.

ಕನ್ನಡದಲ್ಲಿ ಸಿಕ್ಕ ಬೃಹತ್ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ತಮಿಳು, ಮಲಯಾಳಂ ಹಾಗೂ ಹಿಂದಿ ಆವೃತ್ತಿಗಳ ಡಬ್ಬಿಂಗ್ ಬಗ್ಗೆ  ಚರ್ಚೆ ನಡೆಸುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!