‘ಮೆಹಂದಿ ಮದ್ಯ ಸೇವಿಸಿದ್ದರೆ ಹಾಡುವುದನ್ನೇ ನಿಲ್ಲಿಸುತ್ತೇನೆ’

ದಲೇರ್ ಮೆಹಂದಿ ಎಂದಾದರೂ ಮದ್ಯಪಾನ ಮಾಡಿರುವುದು ಕಂಡುಬಂದರೆ  ತಾನು ಹಾಡುವುದನ್ನೇ ಬಿಟ್ಟುಬಿಡುವುದಾಗಿ ಸಹೋದರ  ಮಿಕಾ ಸಿಂಗ್ ಸವಾಲು ಹಾಕಿದ್ದಾರೆ.

ಉತ್ತರಾಖಂಡದ ಸಚಿವೊಬ್ಬರು  ವೇದಿಕೆಯ ಮೇಲೆ ಪ್ರದರ್ಶನ ನೀಡುವ ವೇದಿಕೆಯ ಮೇಲೆ ದಲೇರ್ ಮೆಹಂದಿ ಮದ್ಯಪಾನ ಮಾಡಿದ್ದರು ಎಂದು ಆರೋಪಿಸಿ ಅವರನ್ನು ತರಾಟೆಗೆ ತೆಗೆದುಕೊಂಡ ಮರುದಿನ  ಅವರ ಸಹೋದರ ಮಿಕಾ ಸಿಂಗ್, ದಲೇರ್ ಮೆಹಂದಿ ಬೆಂಬಲಕ್ಕೆ ನಿಂತಿದ್ದಾರೆ.

ದಲೇರ್ ಮೆಹಂದಿ ಮದ್ಯಪಾನ ಮಾಡಿದ್ದರು ಎಂಬ ಮಾಧ್ಯಮ ವರದಿಗಳನ್ನು ತೀವ್ರವಾಗಿ ಖಂಡಿಸಿದ ಮಿಕಾ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

‘ದಲೇರ್ ಮೆಹಂದಿ ಹಾಡುವಾಗ ಮದ್ಯಪಾನ ಮಾಡಿದ್ದರು. ಅವರಿಗೆ ಸರಿಯಾಗಿ ನಿಲ್ಲಲೂ ಆಗುತ್ತಿರಲಿಲ್’ ಎಂದು ನೀವೆಲ್ಲರೂ ಸುಳ್ಳು ಸುದ್ದಿ ಹಬ್ಬಿಸಿದ್ದೀರಿ. ಮೊದಲನೆಯದಾಗಿ, ನಾನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಅವರು ಕಳೆದ 30 ವರ್ಷಗಳಿಂದ ಸೂಪರ್‌ಸ್ಟಾರ್ ಆಗಿದ್ದಾರೆ. ಅವರ ಕೈಯಲ್ಲಿ ಮದ್ಯದ ಲೋಟವನ್ನಾಗಲಿ ಅಥವಾ ಅವರ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಮದ್ಯದ ಹೊಳೆಯೇ ಹರಿಯುವುದನ್ನಾಗಲಿ ನೀವು ಎಂದಾದರೂ ನೋಡಿದ್ದೀರಾ?” ಎಂದು ಮಿಕಾ ಪ್ರಶ್ನಿಸಿದ್ದಾರೆ.

‘ನೀವು ನೋಡಲೇ ಇಲ್ಲ ಎಂದ ಮೇಲೆ, ಅವರಿಗೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ಕಲಾವಿದರಾದ ನಾವು ಯಾರಾದರೂ ಕೇಳಿದಾಗ ‘ಸರಿ, ನಾವು ಪ್ರದರ್ಶನ ನೀಡುತ್ತೇವೆ’ ಎಂದು ಒಪ್ಪಿಕೊಳ್ಳುತ್ತೇವೆ. ನಮಗೆ 104 ಡಿಗ್ರಿ ಜ್ವರವಿದ್ದರೂ ಅದು ಮುಖ್ಯವಲ್ಲ. ನನಗೆ ಅನಾರೋಗ್ಯವಿದ್ದು, ನಾಡಿದ್ದು ಪ್ರದರ್ಶನವೊಂದಕ್ಕೆ ಈಗಾಗಲೇ ಒಪ್ಪಿಕೊಂಡಿದ್ದರೆ, ಸಂಭಾವನೆ ಎಷ್ಟೇ ಇರಲಿ, ನಾನು ಆ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ. ದಲೇರ್ ಕೂಡ ಬಹುಶಃ ಹೀಗೆಯೇ ಮಾಡಿರಬಹುದು’ ಎಂದು ತಿಳಿಸಿದ್ದಾರೆ.

‘ಯಾರಾದರೂ ಸಾಕ್ಷ್ಯಾಧಾರವಿಲ್ಲದೆ ಆರೋಪಗಳನ್ನು ಮಾಡಿದರೆ ದಯವಿಟ್ಟು ಅದನ್ನು ಕುರುಡಾಗಿ ನಂಬಬೇಡಿ. ಸತ್ಯವನ್ನು ಪರಿಶೀಲಿಸದೆ ಆ ಸುದ್ದಿಯನ್ನು ಹರಡಬೇಡಿ. ವೇದಿಕೆಯ ಮೇಲೆ ದಲೇರ್ ಮೆಹಂದಿ ಅವರೊಂದಿಗೆ ನಡೆದುಕೊಂಡ ರೀತಿ ಬೇಸರ ತರಿಸಿದೆ. ಗೌರವಾನ್ವಿತ ಸಚಿವರೊಬ್ಬರು ವೇದಿಕೆಯ ಮೇಲೆ ಬಂದು, ಅವರು ಮದ್ಯಪಾನ ಮಾಡಿದ್ದಾರೆ ಎಂದು ಆರೋಪಿಸಿದರು. ಆದರೆ ಇಂತಹ ಆರೋಪಗಳನ್ನು ಪ್ರಕಟಿಸುವ ಮೊದಲು ಸತ್ಯವನ್ನು ಪರಿಶೀಲಿಸಿ ಕಲಾವಿದರಿಗೆ ತಮ್ಮವಾದವನ್ನು ಮಂಡಿಸಲು ಅವಕಾಶ ನೀಡಬಾರದೇ? ಕಳೆದ ಎರಡು ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಆದರೂ ಅವರು ತಮ್ಮ ತಂಡದೊಂದಿಗೆ ಪ್ರದರ್ಶನಗಳನ್ನು ಮುಂದುವರಿಸಿದ್ದಾರೆ. ಕಲಾವಿದರನ್ನು ಗೌರವಿಸಿ” ಎಂದು ಹೇಳಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!