ರಾಜ್ ಬಿ. ಶೆಟ್ಟಿ ಅಭಿನಯದ ‘ರಾಕ್ಷಸಪುರದೊಳ್’ ಚಿತ್ರ ‘ರಾಕ್ಷಸಪುರಂ’ ಹೆಸರಿನಲ್ಲಿ ತೆಲುಗಿನಲ್ಲಿ ಬಿಡುಗಡೆ ಆಗಲಿದೆ.
ನಿರ್ಮಾಪಕ ಕೆ.ಎಸ್. ರಾಮರಾವ್ ಪ್ರಸ್ತುತಪಡಿಸುತ್ತಿರುವ ಕೊಲೆ ನಿಗೂಢ ಥ್ರಿಲ್ಲರ್‌ಗೆ U/A ಪ್ರಮಾಣಪತ್ರ ದೊರೆತಿದ್ದು, ಮೇ 15 ರಂದು ತೆಲುಗು ಭಾಷೆಯ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಪೋಲಿಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ. ಪ್ರೇಕ್ಷಕರಿಗೆ ಅವರು ನಟನೆಯ ಮೂಲಕ ಮನರಂಜನೆ ನೀಡುವುದು ಖಚಿತ ಆಗಿದೆ.
‘ಈ ಚಿತ್ರದ ಮೇಕಿಂಗ್ ಮತ್ತು ಸಸ್ಪೆನ್ಸ್ ಅಂಶಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಅದಕ್ಕಾಗಿಯೇ ನಾವು ಈ ಚಿತ್ರವನ್ನು ತೆಲುಗು ಪ್ರೇಕ್ಷಕರಿಗೆ ಯಾವುದೇ ರಾಜಿ ಮಾಡಿಕೊಳ್ಳದೆ ಪ್ರಸ್ತುತಪಡಿಸಲು ನಿರ್ಧರಿಸಿದ್ದೇವೆ. ಚಿತ್ರವನ್ನು ಆರಂಭದಲ್ಲಿ ಮೇ 7 ರಂದು ಬಿಡುಗಡೆ ಮಾಡಲು ಯೋಜಿಸಲಾಗಿದ್ದರೂ, ಹೆಚ್ಚು ಪ್ರೇಕ್ಷಕರನ್ನು ತಲುಪುವಂತೆ ನೋಡಿಕೊಳ್ಳಲು ನಾವು ಅದನ್ನು ಮೇ 15ರಂದು ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ’ ಎಂದಿದ್ದಾರೆ ನಿರ್ಮಾಪಕರು.
ರವಿ ವರ್ಮ ನಿರ್ಮಿಸಿರುವ ಈ ಚಿತ್ರ ರೋಮಾಂಚಕ ಕೊಲೆ ನಿಗೂಢ ಥ್ರಿಲ್ಲರ್ ಆಗಿದೆ. ಇನ್ವೆಸ್ಟಿಗೇಷನ್ ಥ್ರಿಲ್ಲರ್ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಕಥೆಯು ಪ್ರತಿ ಹಂತದಲ್ಲೂ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತದೆ. ತೆಲುಗು ಪ್ರೇಕ್ಷಕರು ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
—





Be the first to comment