ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ ಚಿತ್ರಕ್ಕೆ ಒಟಿಟಿಯಲ್ಲಿ ಭಾರೀ ಬೇಡಿಕೆ ಕಂಡು ಬಂದಿದೆ.
ಈ ಹಿಂದೆ ಅಮೇಜಾನ್ ₹120 ಕೋಟಿಗೆ ಹಕ್ಕು ಖರೀದಿಸಿದ್ದರೂ, ಚಿತ್ರ ಬಿಡುಗಡೆ ವಿಳಂಬ ಆದ ಕಾರಣ ಇದು ರದ್ದು ಆಗಿತ್ತು. ವಿಜಯ್ ಸಿಎಂ ಆಗುತ್ತಲೇ ಈಗ ಹೊಸ ಓಟಿಟಿ ಸಂಸ್ಥೆಗಳು ಒಟಿಟಿ ಹಕ್ಕಿಗೆ 150 ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ಪೈಪೋಟಿ ನಡೆಸುತ್ತಿವೆ.
ಈ ಹೊಸ ಡೀಲ್ ನಿರ್ಮಾಪಕರಿಗೆ ದೊಡ್ಡ ಲಾಭ ತರುವ ನಿರೀಕ್ಷೆ ಇದೆ. ಚಿತ್ರ ಮುಂದಿನ 2 ವಾರಗಳಲ್ಲಿ ಬಿಡುಗಡೆ ಆಗಲಿದೆ.
ವಿಜಯ್ ಚಿತ್ರದ ಹಕ್ಕುಗಳಿಗಾಗಿ ಹಣ ಸುರಿಯಲು ಅನೇಕ ಕಂಪನಿಗಳು ಸಿದ್ಧವಾಗಿವೆ. ಸಿಎಂ ಆಗುತ್ತಿದ್ದಂತೆ ಚಿತ್ರದ ನಸೀಬು ಬದಲಾಗಿ ಹೋಗಿದೆ. ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರುವ ಕಾರಣದಿಂದಾಗಿ ಈ ಚಿತ್ರವನ್ನು ಸೆನ್ಸಾರ್ ನೆಪಒಡ್ಡಿ ತಡೆಹಿಡಿಯಲು ಯತ್ನಿಸಲಾಗಿತ್ತು ಎನ್ನುವ ಆರೋಪಗಳು ಕೇಳಿ ಬಂದಿವೆ.





Be the first to comment