ಎರಡನೇ ದಿನವೂ ‘ಕೆಡಿ’ ಭರ್ಜರಿ ಗಳಿಕೆ

ಧ್ರುವ ಸರ್ಜಾ ಅವರ ‘ಕೆಡಿ’ ಸಿನಿಮಾ ಎರಡನೇ ದಿನವೂ ಭರ್ಜರಿ ಗಳಿಕೆ ಮಾಡಿದೆ.

ಮೇ 1ರ ಕಾರ್ಮಿಕರ ದಿನದ ರಜೆ ಸಿನಿಮಾದ ಗಳಿಕೆಗೆ ನೆರವಾಗಿದೆ. ಚಿತ್ರದ ಗ್ರಾಸ್ ಕಲೆಕ್ಷನ್ ಎರಡು ದಿನಕ್ಕೆ 8.19 ಕೋಟಿ ರೂಪಾಯಿ ಆಗಿದೆ. ನೆಟ್ ಕಲೆಕ್ಷನ್ 7 ಕೋಟಿ ರೂಪಾಯಿ ಆಗಿದೆ.

ಮೊದಲ ದಿನ ಚಿತ್ರಕ್ಕೆ 845 ಶೋಗಳನ್ನು ನೀಡಲಾಗಿತ್ತು. ಎರಡನೇ ದಿನ ಸಿನಿಮಾಗೆ 817 ಶೋಗಳನ್ನು ನೀಡಲಾಗಿತ್ತು. ಮೇ 1 ರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡಿದ್ದಾರೆ.

ಕೆಡಿ ಚಿತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರಮೇಶ್ ಅರವಿಂದ್, ರವಿಚಂದ್ರನ್, ಶಿಲ್ಪಾ ಶೆಟ್ಟಿ, ರವಿ ಶಂಕರ್ ಮೊದಲಾದವರು ನಟಿಸಿದ್ದಾರೆ. ‘ಮಾರ್ಟಿನ್’ ಚಿತ್ರದ ಸೋಲಿನಿಂದ ಧ್ರುವ ಸರ್ಜಾ ಅವರು ಕಂಗೆಟ್ಟಿದ್ದರು. ಅವರಿಗೆ ಈ ಚಿತ್ರ ದೊಡ್ಡ ಗೆಲುವು ನೀಡಿದೆ. ಧ್ರುವ ಸರ್ಜಾ ವೃತ್ತಿ ಜೀವನದ ದೃಷ್ಟಿಯಿಂದ ಸಿನಿಮಾ ತುಂಬಾ ಮುಖ್ಯವಾಗಿತ್ತು.

‘ಕೆಡಿ’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬಂದಿದೆ. ಜೋಗಿ ಪ್ರೇಮ್ ಅವರು ಹಲವು ವರ್ಷಗಳ ಬಳಿಕ ಕಂಬ್ಯಾಕ್ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!