‘ಪೆದ್ದಿ’ ಜೂನ್ 4ರಂದು ಬಿಡುಗಡೆ

ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೆದ್ದಿ’ ಜೂನ್ 4ರಂದು ಬಿಡುಗಡೆಯಾಗಲಿದೆ.

ಏಪ್ರಿಲ್ 30ಕ್ಕೆ ಬಿಡುಗಡೆ ನಿಗದಿಯಾಗಿದ್ದ ಈ ಚಿತ್ರ, ಈಗ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. ನಿರ್ಮಾಪಕ ವೆಂಕಟ ಸತೀಶ್ ಕಿಲಾರು ಅವರು ಜೂನ್ 3ರಂದು ದೇಶಾದ್ಯಂತ ಪ್ರೀಮಿಯರ್ ಶೋಗಳನ್ನು ನಡೆಸುವುದಾಗಿ ತಿಳಿಸಿದ್ದಾರೆ.

ಬುಚಿಬಾಬು ಸನಾ ನಿರ್ದೇಶನದ ‘ಪೆದ್ದಿ’ ಚಿತ್ರ ಒಟ್ಟು ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರ ಹಿಂದಿ ಮಾರುಕಟ್ಟೆಯಲ್ಲೂ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದೆ.  ಈ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ. ಹೀಗಾಗಿ ಹಿಂದಿ ಭಾಗದಲ್ಲೂ ಸಾಕಷ್ಟು ನಿರೀಕ್ಷೆ ಮೂಡಿದೆ.

ಪ್ರೀಮಿಯರ್ ಶೋಗಳ ದರ ಹೆಚ್ಚಿಸಲು ಆಂಧ್ರ-ತೆಲಂಗಾಣ ಸರ್ಕಾರಕ್ಕೆ ಮೊದಲೇ ಅರ್ಜಿ ಸಲ್ಲಿಸಬೇಕು. ಜೂನ್ 3 ಹತ್ತಿರವಿರುವುದರಿಂದ ಕಡಿಮೆ ಸಮಯದಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಸಾಧ್ಯವೇ? ಅಥವಾ ಸಾಮಾನ್ಯ ದರದಲ್ಲೇ ಪ್ರೀಮಿಯರ್ ಲಭ್ಯವಿರುತ್ತದೆಯೇ? ಎಂದು ಚರ್ಚೆಗಳು ಶುರುವಾಗಿವೆ.

ಜೂನ್ 4ರಂದು  ‘ಟಾಕ್ಸಿಕ್’ ಚಿತ್ರ ತೆರೆಗೆ ಬರಬೇಕಿತ್ತು. ಅದು ಮುಂದಕ್ಕೆ ಹೋಗಿರುವುದುರಿಂದ ‘ಪೆದ್ದಿ’ ಸಿನಿಮಾ ತೆರೆಗೆ ಬರುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!