ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ – ಧನ್ಯತಾ ದಂಪತಿಗೆ ಗಂಡು ಮಗು ಹುಟ್ಟಿದೆ.
ಈ ಸಿಹಿ ಸುದ್ದಿಯನ್ನು ಡಾಲಿ ಧನಂಜಯ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ದಂಪತಿ ಪ್ರಕೃತಿ ಮಡಿಲಲ್ಲಿ ಮಾಡಿಕೊಂಡಿದ್ದ ಬೇಬಿಬಂಪ್ ಫೋಟೋಶೂಟ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ “Our universe is expanding” ಎಂದು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆದಿತ್ತು. ಅದಾದ ಕೆಲವೇ ದಿನಗಳಲ್ಲಿ ಗಂಡು ಮಗು ಜನನವಾಗಿದೆ.
2025ರಲ್ಲಿ ಡಾಲಿ ಧನಂಜಯ್-ಡಾ.ಧನ್ಯತಾ ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಮತ್ತು ಆರತಕ್ಷತೆ ಕಾರ್ಯಕ್ರಮ ಆದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು. ಸಿನಿಮಾ ಮತ್ತು ರಾಜಕೀಯದ ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದರು.
ದಂಪತಿಗೆ ಅಭಿಮಾನಿಗಳು ಮತ್ತು ಸಿನಿರಂಗದವರು ಶುಭಾಶಯ ಹಾರೈಸುತ್ತಿದ್ದಾರೆ.
—–





Be the first to comment