ಜಾಲಿ

Movie Review: ಸೋಲರಿಯದ ಜಾಲಿಯ ಬಾಳಿನಲ್ಲೊಂದು ಪ್ರೇಮಲೀಲೆ

ಚಿತ್ರ: ಜಾಲಿ
ನಿರ್ದೇಶನ: ತಾರುಷ್ ಕೃಷ್ಣ
ನಿರ್ಮಾಣ: ಬ್ರಿಜ್ ಯಾದವ್
ತಾರಾಗಣ: ತಾರುಷ್ ಕೃಷ್ಣ, ಪದ್ಮಶ್ರೀ ಸಿ ಜೈನ್, ಶೋಭರಾಜ್ ಮೊದಲಾದವರು.
ರೇಟಿಂಗ್: 3.5

ಪ್ರೀತಿಸಿದ ಜೋಡಿ ಒಂದಾಗಬೇಕಾದರೆ ಏನಿರಬೇಕು? ಇಬ್ಬರ ಮನೆ ಮಂದಿ ಒಪ್ಪಬೇಕು. ಆದರೆ ಇಂಥ ಸಿಂಪಲ್‌ ವಿಚಾರದಲ್ಲೇ ಒಂದು ಟ್ವಿಸ್ಟ್‌ ಇಟ್ಟು ಕಥೆಯನ್ನು ಹೇಗೆ ರೋಚಕಗೊಳಿಸಬಹುದು ಎಂದು ತೋರಿಸಿರುವ ಚಿತ್ರ ಜಾಲಿ.

ಜಾಲಿ ಎನ್ನುವುದು ಕಥಾ ನಾಯಕನ ಹೆಸರು. ಗ್ಯಾರೇಜ್‌ ಒಂದರಲ್ಲಿ ಅನಾಥನಂತೆ ಕೆಲಸ ಮಾಡುವ ಆತನ ಹಿನ್ನೆಲೆ ಏನು ಎನ್ನುವುದು ಚಿತ್ರದ ಕೊನೆಯಲ್ಲಿ ರಿವೀಲಾಗುತ್ತದೆ. ಆದರೆ ಯಾವ ದೊಡ್ಡ ಹಿನ್ನೆಲೆಯೂ ಇರದೆ, ಕೇವಲ ತನ್ನ ಕ್ಯಾರೆಕ್ಟರ್‌ ಮೂಲಕವೇ ಕಥೆಯನ್ನು ಕಟ್ಟುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ತಾರುಷ್‌ ಕೃಷ್ಣ.

ಜಾಲಿ ಪಾತ್ರಕ್ಕೆ ಜೀವ ತುಂಬಿ ನಟಿಸಿರುವ ಕಲಾವಿದ ತಾರುಷ್‌ ಕೃಷ್ಣ. ವಿಶೇಷ ಏನೆಂದರೆ ಮೊದಲ ಬಾರಿಗೆ ನಾಯಕನಾಗಿ ನಟಿಸುವ ಜತೆಯಲ್ಲೇ ಚಿತ್ರದ ನಿರ್ದೇಶನವನ್ನು ಕೂಡ ನಿರ್ವಹಿಸಿರುವ ಕೀರ್ತಿ ತಾರುಷ್‌ ಕೃಷ್ಣ ಅವರದ್ದು. ಎತ್ತರ ಸೌಂದರ್ಯದ ಜತೆಗೆ ಪ್ರತಿಭೆಯಲ್ಲಿಯೂ ಗಮನ ಸೆಳೆಯುತ್ತಾರೆ ಚಾರುಷ್.‌ ಇವರ ಜೋಡಿಯಾಗಿ ಪದ್ಮಶ್ರೀ ಜೈನ್‌ ನಟಿಸಿದ್ದಾರೆ. ಚಿತ್ರದಲ್ಲಿ ಈಕೆಯ ಹೆಸರು ಜಾನು. ಪವರ್‌ ಸ್ಟಾರ್‌ ಅಪ್ಪು ಅಂದರೆ ಈಕೆಗೆ ಅಭಿಮಾನ. ನಟನೆಯಲ್ಲಿ ವೈವಿಧ್ಯತೆ ತೋರಿಸಿರುವ ಈ ನಟಿ ಪ್ರೇಕ್ಷಕರ ಮನಗೆಲ್ಲುತ್ತಾರೆ. ನಾಯಕನಿಗೆ ಪ್ರೇಮಿ ಮತ್ತು ರೌಡಿ ಎನ್ನುವ ಎರಡು ಆಯಾಮಗಳಾದರೆ, ನಾಯಕಿಗೆ ಅಪ್ಪು ಅಭಿಮಾನಿ, ವಿದ್ಯಾರ್ಥಿನಿ, ಪ್ರೇಯಸಿ, ತಂದೆಯ ಮುದ್ದಿನ ಮಗಳು, ರೋಗಿ ಮತ್ತು ಲವಲವಿಕೆಯ ಹುಡುಗಿ ಹೀಗೆ ವಿವಿಧ ಛಾಯೆಗಳಿವೆ. ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಹೇಳಲೇಬೇಕು.

ಶೋಭರಾಜ್‌ ಅವರು ಒಂದು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಆರ್‌ ಕೆ ಎಂದು ಹೆಸರು. ನಾಯಕಿಯ ತಂದೆಯ ಪಾತ್ರದಲ್ಲಿ ಕೃಷ್ಣಪ್ಪ ವೇಣುಗೋಪಾಲ್ ಅಭಿನಯವಿದೆ. ರೇಖಾದಾಸ್, ಸುಷ್ಮಿತಾ ಜಗ್ಗಪ್ಪ, ಮಹಾಂತೇಶ್ ಹೀರೇಮಠ ಹೀಗೆ ಜನಪ್ರಿಯ ಕಲಾವಿದರ ದಂಡೇ ಚಿತ್ರದಲ್ಲಿದೆ. ನಿತಿನ್ ರಾಜ್ ಸಂಗೀತದಲ್ಲಿನ ಹಾಡುಗಳು ಮನಸೆಳೆಯುತ್ತವೆ.

ಪ್ರೀತಿ, ಪ್ರೇಮ, ಹೊಡೆದಾಟ, ಫಾದರ್‌ ಸೆಂಟಿಮೆಂಟ್‌ ಹೀಗೆ ಮೊದಲ ಚಿತ್ರದಲ್ಲೇ ಸಾಕಷ್ಟು ವಿಭಾಗಗಳನ್ನು ಕವರ್‌ ಮಾಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ತಾರುಷ್‌ ಕೃಷ್ಣ. ಮಾತ್ರವಲ್ಲ, ಎಲ್ಲ ಕಡೆಯೂ ಮನರಂಜನೆಗೆ ಕೊರತೆಯಾಗದಂತೆ ನಿಭಾಯಿಸುವಲ್ಲಿ ಗೆದ್ದಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!