ಭಾರತದಲ್ಲಿ ಇತಿಹಾಸ ಬರೆದ ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’

ಟಾಮ್ ಹಾಲೆಂಡ್ ಅಭಿನಯದ ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಮೊದಲ ದಿನವೇ ಭಾರತದಲ್ಲಿ  ಅತಿ ಹೆಚ್ಚು ಗಳಿಕೆ ಮಾಡಿದ ವಿದೇಶಿ ಸಿನಿಮಾ ಎಂಬ ಹೊಸ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಬಿಡುಗಡೆಯಾದ ಮೊದಲ ದಿನವೇ   60.60 ಕೋಟಿ ನೆಟ್ ಕಲೆಕ್ಷನ್ ದಾಖಲಿಸಿದೆ.  ಈ ಹಿಂದೆ ‘ಅವೆಂಜರ್ಸ್: ಎಂಡ್‌ಗೇಮ್’  65 ಕೋಟಿ ಗ್ರಾಸ್ ಗಳಿಸಿ ನಿರ್ಮಿಸಿದ್ದ ದಾಖಲೆಯನ್ನು ಹಿಂದಿಕ್ಕಿದೆ.

ದೇಶಾದ್ಯಂತ ಸುಮಾರು 17,250 ಶೋಗಳು ಪ್ರದರ್ಶನಗೊಂಡಿದೆ. ಇಂಗ್ಲಿಷ್ ಆವೃತ್ತಿ  32.25 ಕೋಟಿ ಗಳಿಸಿದರೆ, ಹಿಂದಿ ಡಬ್ಬಿಂಗ್ 22 ಕೋಟಿ ಕಲೆಕ್ಷನ್ ಮಾಡಿದೆ. ತೆಲುಗು ಆವೃತ್ತಿ  3.25 ಕೋಟಿ, ತಮಿಳು 3 ಕೋಟಿ, ಕನ್ನಡ ಆವೃತ್ತಿ  3 ಲಕ್ಷ ಗಳಿಕೆ ದಾಖಲಿಸಿದೆ.

ಜಾಗತಿಕ ಮಟ್ಟದಲ್ಲಿ ಮೂಡಿದ್ದ ನಿರೀಕ್ಷೆ, ಬಿಡುಗಡೆಯಾದ ತಕ್ಷಣ ಸಿಕ್ಕ ಅದ್ಭುತ ವಿಮರ್ಶೆಗಳು, ದುಬಾರಿ ಟಿಕೆಟ್ ದರದ ನಡುವೆಯೂ ಅಭಿಮಾನಿಗಳ ಭಾರೀ ಸ್ಪಂದನೆ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸಿನಿಮಾಗಳ ಸ್ಪರ್ಧೆಯ ಕೊರತೆ ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಚಿತ್ರದ ಗೆಲುವಿಗೆ ಪ್ರಮುಖ ಕಾರಣಗಳಾಗಿವೆ. ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!