ಪ್ರೇಮಿಗಳಿಗೆ ಸ್ಫೂರ್ತಿಯಾಗುವ ಏನಾಯಿತು ನನಗೀಗ ಅಲ್ಬಮ್ ಸಾಂಗ್ ಬಿಡುಗಡೆ

ವಿಜೇಂದ್ರ ಹಿರೇಮಠ ನಿರ್ದೇಶನದ  ಏನಾಯಿತು ನನಗೀಗ ಆಲ್ಬಮ್ ಸಾಂಗ್ ಅನ್ನು VRH ಪ್ರೊಡಕ್ಷನ್ P-SQUARE ಪ್ರೊಡಕ್ಷನ್ ಜೊತೆಗೆ ಸಂಯೋಜಿತವಾಗಿದ್ದು ಜೂನ್ 10 ಶುಕ್ರವಾರದಂದು ಸಂಜೆ 6.10 ಕ್ಕೆ A2 Entertainment ಯುಟ್ಯೂಬ್ ಚಾನೆಲ್ ಬಿಡುಗಡೆ ಮಾಡುವುದರ ಮುಖಾಂತರ ಚಾನೆಲ್ ನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

2 ದಿನದಲ್ಲಿ ಸಕಲೇಶಪುರದಲ್ಲಿ ಚಿತ್ರಿಸಿದ ಈ ಹಾಡಿನ ಸಾಲುಗಳು ಪ್ರೀತಿಯ ಬಲೆಗೆ ಬಿದ್ದಿರುವ ನವ ಪ್ರೇಮಿಗಳನ್ನು ಪ್ರೀತಿಯ ಅಮಲಿನಲ್ಲಿ ತೆಲಾಡುವಂತೆ ಮಾಡುತ್ತಿದೆ.
ಅನುರಾಧ ಭಟ್ ಮತ್ತು ವಿಜೇಂದ್ರ ಹಿರೇಮಠ
ಹಾಡಿರುವ ಈ ಹಾಡಿನಲ್ಲಿ ಬಿಜಾಪುರದ ಭಾಸ್ಕರ್ ಹಾಗೂ ದೀನ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ 22 ಗಂಟೆಗಳಲ್ಲಿ 8K ವೀಕ್ಷಣೆಯಿಂದ ಒಳ್ಳೆಯ ರೆಸ್ಪಾನ್ಸ್ ಪಡೆದು ಹೊಸ ಯುವ ನಟ-ನಟಿಯರಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ.

ಮೊದಲ ಬಾರಿ ನಾನು ನಾಯಕನಾಗಿ ಅಭಿನಯಿಸಿರುವ ಏನಾಯಿತು ನನಗೀಗ ಆಲ್ಬಮ್ ಸಾಂಗ್ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಚಿಕ್ಕಂದಿನಿಂದಲೂ ನನಗೆ ಡ್ಯಾನ್ಸ್ ನಲ್ಲಿ ಆಸಕ್ತಿ ಇದ್ದು ಚಿತ್ರರಂಗಕ್ಕೆ ಬರಬೇಕೆಂದು ಕನಸು ಕಂಡಿದ್ದೆ ನನ್ನೆಲ್ಲಾ ಆಸೆಗಳಿಗೆ ಬೆನ್ನೆಲುಬಾಗಿ ನಿಂತು ನನ್ನ ಪ್ರತಿ ಪ್ರಯತ್ನಕ್ಕೂ ಶುಭ ಹಾರೈಸಿದ ನನ್ನ ತಂದೆ ತಾಯಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ.
ನನ್ನ ಮೊದಲ ಪ್ರಯತ್ನಕ್ಕೆ ನಿರೀಕ್ಷೆಗೂ ಮೀರಿದ ಮೆಚ್ಚುಗೆಯೂ ಜನರಿಂದ ಸಿಕ್ಕಿರುವುದು ನನ್ನ ಮುಂದಿನ ಪ್ರಾಜೆಕ್ಟ್ ಗಳ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಹೀಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುವುದರ ಮೂಲಕ ಜನರನ್ನು ರಂಜಿಸಿ ಬೇಕೆಂಬುದು ನನ್ನ ಉದ್ದೇಶವಾಗಿದೆ ಎಂದರೂ ಭಾಸ್ಕರ್ ಬಗಲಿ ಅವರು.

ನಾಯಕಿ  ಮಾತಾಡಿ ನಾನು ಮೊದಲು ಮಾಡೆಲಿಂಗ್ ನಲ್ಲಿ ಇದ್ದೆ ಅಲ್ಲಿ ನನ್ನ ನೋಡಿ ನಿರ್ದೇಶಕರು ನನಗೆ ಈ ಹಾಡಿನಲ್ಲಿ ಅವಕಾಶ ಕೊಟ್ಟಿದ್ದಾರೆ ಎಂದರು.

ವಿಜೇಂದ್ರ ಹಿರೇಮಠ ನಿರ್ದೇಶನದ ಈ ಹಾಡಿಗೆ ನಿರ್ಮಾಪಕರಾಗಿ ಬಾಪಣ್ಣ ಮತ್ತು ಕ್ಯಾಮೆರಾ ವರ್ಕಿಂಗ್ ಎಸ್.ವೈ.ಬಿ ಹೊನ್ನಳ್ಳಿ ಯವರು ಚಿತ್ರೀಕರಿಸಿದ್ದು ಕ್ರಿಯೇಟಿವ್ ಹೆಡ್ ಆಗಿ ಪುನೀತ್ ಪ್ರೀತು ಮತ್ತು ಪುನೀತ್ ಕುಮಾರ್.ಡಿ,ಸಂಪಾದಕರು- ಕುಮಾರ್ ಸಿ. ಎಚ್ ,DI- ನಿಖಿಲ್ ಕರಿಯಪ್ಪ , ನೃತ್ಯ ಸಂಯೋಜಕ- ಎಸ್. ಅರುಣ್ ಕುಮಾರ್ ರೈ ಪೊಸ್ಟರ್ ಡಿಸೈನಿಂಗ್ ನಂದೀಶ್ ಎಲ್ಲರೂ ಜೊತೆಗೂಡಿ ಈ ಹಾಡಿನ ಯಶಸ್ಸಿನ ಪಾಲುದಾರರಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!