ಮ್ಯಾಗ್ನುಮ್ ಓಪಸ್

ಮ್ಯಾಗ್ನುಮ್ ಓಪಸ್ ಸೌಂದರ್ಯ ಸ್ಪರ್ಧೆಯಲ್ಲಿ ಸುಂದರಿಯರ ಕಲರವ

ಮ್ಯಾಗ್ನುಮ್ ಓಪಸ್ ಪ್ರೊಡಕ್ಷನ್ಸ್ ಸಂಸ್ಥೆ ಆಯೋಜನೆ ಮಾಡಿದ ‘ಫ್ಯಾಷನ್ ವೀಕ್ ಸೀಜನ್ -4’ ಫ್ಯಾಷನ್ ಷೋ ಸ್ಪರ್ಧೆ ಕೋರಮಂಗಲದ ಬಿಲ್ಡರ್ಸ್ ಎನ್.ಜಿ.ಓ. ಕ್ಲಬ್ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ವೇದಿಕೆಯಲ್ಲಿ ನಡೆದ ಕ್ಯಾಟ್ ವಾಕ್ ನಲ್ಲಿ ನೂರಾರು ಸುಂದರಿಯರು ಭಾಗವಹಿಸಿ ತಮ್ಮ ಪ್ರತಿಭೆ ಮೆರೆದರು.

ಈ ಸಂದರ್ಭಲ್ಲಿ ಮಾತನಾಡಿದ ಸಂಸ್ಥೆಯ ಕ್ರಿಯೇಟಿವ್ ಹೆಡ್ ವಿಜಯಕುಮಾರ್ 2013ರಲ್ಲಿ ಪ್ರಾರಂಭವಾದ ನಮ್ಮ ಮ್ಯಾಗ್ನಮ್ ಓಪಸ್ ಪ್ರೊಡಕ್ಷನ್ ಸಂಸ್ಥೆಯಿಂದ ಆಯೋಜಿಸಿರುವ ನಾಲ್ಕನೇ ಫ್ಯಾಷನ್ ಷೋ ಇದು. ನಮ್ಮ ಸಂಸ್ಥೆಯ ಎ.ಡಿ ಅಜಯ್ ಕುಮಾರ್ ಅವರು ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ನಮ್ಮ ಸಂಸ್ಥೆಯಿಂದ ಚಲನಚಿತ್ರ ನಿರ್ಮಾಣ, ಜಾಹೀರಾತು, ಸೌಂದರ್ಯ ಸ್ಪರ್ಧೆಯಲ್ಲಿ ಹೆಚ್ಚಾಗಿ ಹೊಸ ಪ್ರತಿಭಾವಂತ ಸ್ಪರ್ಧಿಗಳಿಗೆ ಅವಕಾಶ ನೀಡುತ್ತಿದ್ದೇವೆ ಎಂದು ವಿವರಿಸಿದರು.

ಮ್ಯಾಗ್ನುಮ್ ಓಪಸ್

ನಂತರ ಎಂಡಿ ಅಜಯ‌ಕುಮಾರ್ ಮಾತನಾಡುತ್ತ ನಾವು ಈ ಫ್ಯಾಷನ್ ಷೋ ಮೂಲಕ ನ್ಯೂ ಫೇಸಸ್ ಇಂಟ್ರಡ್ಯೂಸ್ ಮಾಡ್ತಿದ್ದೇವೆ. ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಶ್ರೀಲಂಕಾ ಹೀಗೆ ಹಲವಾರು ಕಡೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೀಜನೆ ಮಾಡಿದ್ದೇವೆ ಎಂದರು. ಈ ಕಾರ್ಯಕ್ರಮದಲ್ಲಿ ಆಕರ್ಷಕ ಡ್ಯಾನ್ಸ್ ಪರ್ ಫಾರ್ಮನ್ಸ್, ಎಂಟರ್ ಟೈನ್ ಮೆಂಟ್ ಕಾರ್ಯಕ್ರಮ ನಡೆದವು.

ಮ್ಯಾಗ್ನುಮ್ ಓಪಸ್

Be the first to comment

Leave a Reply

Your email address will not be published. Required fields are marked *

Translate »
error: Content is protected !!