ಬೆಂಗಳೂರು : ಅರಮನೆ ಮೈದಾನದಲ್ಲಿ ನಡೆಯುತ್ತಿರುವ TV9 Lifestyle, Automobile & Furniture Expo 2026 ಪ್ರದರ್ಶನದಲ್ಲಿ ಕನ್ನಡದ ‘ಪ್ರೇಮದ ಊರಲಿ’ (Premada Oorali) ಚಲನಚಿತ್ರ ತಂಡ ಭಾಗವಹಿಸಿದೆ.
ಪ್ರೇಮದ ಊರಲಿ’ ಸಿನಿಮಾ ತಂಡವು ಬೆಂಗಳೂರಿನಲ್ಲಿ ಆಯೋಜಿಸಲಾದ ‘TV9 ಲೈಫ್ಸ್ಟೈಲ್, ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ 2026’ ಅನ್ನು ಭವ್ಯವಾಗಿ ಉದ್ಘಾಟಿಸಿದೆ. ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿರುವ ‘ಪ್ರೇಮದ ಊರಲಿ’ ಚಿತ್ರದ ನಾಯಕ ನಟ ಶ್ರೀರಾಮ್ ಹಾಗೂ ನಾಯಕಿ ತಪಸ್ವಿನಿ ಪೂಣಚ್ಚ ಅವರು ಈ ಎಕ್ಸ್ಪೋಗೆ ಚಾಲನೆ ನೀಡಿ, ಚಿತ್ರದ ಯಶಸ್ಸನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ.
ಈ ಎಕ್ಸ್ಪೋದಲ್ಲಿ ಚಿತ್ರತಂಡದ ಸದಸ್ಯರು ಪಾಲ್ಗೊಂಡು, ಸಿನಿಮಾ ಸೃಷ್ಟಿಸಿರುವ ಇತಿಹಾಸ ಮತ್ತು ಪ್ರೇಕ್ಷಕರಿಂದ ಸಿಗುತ್ತಿರುವ ಬೆಂಬಲ ಹಾಗೂ ಕಲೆಕ್ಷನ್ ಕುರಿತು ತಮ್ಮ ಸಂತಸದ ವಿಚಾರಗಳನ್ನು ಮಾಧ್ಯಮ ಮತ್ತು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಭಾರತದಲ್ಲೇ ಮೊದಲು – 115 ಇಂಚಿನ LG ಟಿವಿಯನ್ನು ಇದೇ ಮೊದಲ ಬಾರಿಗೆ TV9 ಎಕ್ಸ್ಪೋದಲ್ಲಿ ಬಿಡುಗಡೆ ಮಾಡಲಾಗಿದೆ. ಈ ವಿಶೇಷ ಕೊಡುಗೆಯು TV9 ಎಕ್ಸ್ ಪೋದಲ್ಲಿ ಮಾತ್ರ ‘ಗಿರಿಯಾಸ್’ (Girias) ಮೂಲಕ ಲಭ್ಯವಿದೆ. ಅದರ ಜೋತೆಗೆ ಹೈಯರ್ (Haier) ಸಂಸ್ಥೆಯಿಂದ ‘ಟ್ರಿಪಲ್ ಡ್ರಮ್’ (Triple drum) ವಾಷಿಂಗ್ ಮೆಷಿನ್.ಕೂಡ ಲಭ್ಯವಿದೆ.
ಈ ಬೃಹತ್ ಪ್ರದರ್ಶನದ ಪ್ರಮುಖ ವಿವರಗಳು ಈ ಕೆಳಗಿನಂತಿವೆ:
• ದಿನಾಂಕಗಳು: ಅಕ್ಟೋಬರ್ 30, ಅಕ್ಟೋಬರ್ 31 ಮತ್ತು ನವೆಂಬರ್ 1, 2026 (ಒಟ್ಟು 3 ದಿನಗಳು).
• ಸ್ಥಳ: ರಾಯಲ್ ತ್ರಿಪುರ ವಾಸಿನಿ, ಅರಮನೆ ಮೈದಾನ (Palace Grounds), ಬೆಂಗಳೂರು.
• ಸಮಯ: ಬೆಳಗ್ಗೆ 10:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ.
• ಪ್ರವೇಶ ಮತ್ತು ಪಾರ್ಕಿಂಗ್: ಸಾರ್ವಜನಿಕರಿಗೆ ಉಚಿತ ಪ್ರವೇಶ ಮತ್ತು ಉಚಿತ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.
ಈ ಎಕ್ಸ್ಪೋದಲ್ಲಿ ಅತ್ಯಾಧುನಿಕ ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು (Furniture), ಹೊಸ ಮಾದರಿಯ ವಾಹನಗಳು (Automobiles) ಮತ್ತು ಲೈಫ್ಸ್ಟೈಲ್ ಉತ್ಪನ್ನಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಇರಲಿದ್ದು, ಭೇಟಿ ನೀಡುವ ಗ್ರಾಹಕರಿಗೆ ವಿಶೇಷ ಕೊಡುಗೆಗಳು ಲಭ್ಯವಿವೆ.





Be the first to comment