ಕಾಜಿಯಾಗೆ ‘ಮಿಸ್ ಯೂನಿವರ್ಸ್ ಇಂಡಿಯಾ-2026’ ಕಿರೀಟ

ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ ‘ಮಿಸ್ ಯೂನಿವರ್ಸ್ ಇಂಡಿಯಾ-2026’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಜೈಪುರದಲ್ಲಿ ನಡೆದ ಅಂತಿಮ ಸುತ್ತಿನಲ್ಲಿ 52 ಸ್ಪರ್ಧಿಗಳನ್ನು ಹಿಂದಿಕ್ಕಿ ಅವರು ವಿಜೇತರಾಗಿದ್ದಾರೆ. ನವೆಂಬರ್‌ನಲ್ಲಿ ಪ್ಯೂರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕಾಜಿಯಾ ಲಿಜ್ ಮೆಜೊ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ತಮಿಳುನಾಡಿನ ವೈಷ್ಣವಿ ಗಣೇಶ್ ಮೊದಲ ರನ್ನರ್‌ʼಅಪ್, ಗುಜರಾತ್‌ʼನ ಅನುಶ್ರೀ ಸತವಾಲೇಕರ್ ಎರಡನೇ ರನ್ನರ್‌ʼಅಪ್ ಹಾಗೂ ಮಹಾರಾಷ್ಟ್ರದ ತೇಜಸ್ವಿನಿ ಶ್ರೀವಾಸ್ತವ ಮೂರನೇ ರನ್ನರ್‌ʼಅಪ್ ಆಗಿದ್ದಾರೆ. ಉತ್ತರಾಖಂಡದ ಅನುಭಾ ವಶಿಷ್ಠ್ ಚೌಧರಿ ನಾಲ್ಕನೇ ರನ್ನರ್‌ಅಪ್ ಸ್ಥಾನ ಪಡೆದಿದ್ದಾರೆ.

2007ರಲ್ಲಿ ಕೇರಳದ ಮಾವೆಲಿಕ್ಕರದಲ್ಲಿ ಕಾಜಿಯಾ ಜನಿಸಿದ್ದು, ರೂಪದರ್ಶಿ, ನಟಿ ಹಾಗೂ ನರ್ತಕಿಯಾಗಿ  ಗುರುತಿಸಿಕೊಂಡಿದ್ದಾರೆ. ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ಅವರು ಬಾಲ್ಯದ ಬಹುಪಾಲು ಸಮಯವನ್ನು  ಅಬುಧಾಬಿಯಲ್ಲಿ ಕಳೆದಿದ್ದಾರೆ.

ಈ ಹಿಂದೆ ಮಿಸ್ ಟೀನ್ ಡಿವಾ ಕಿರೀಟ ಗೆದ್ದಿದ್ದ ಕಾಜಿಯಾ, ‘ಮಿಸ್ ಟೀನ್ ಇಂಟರ್‌ನ್ಯಾಷನಲ್-2025’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಮೊದಲ ರನ್ನರ್‌ʼಅಪ್ ಸ್ಥಾನ ಪಡೆದಿದ್ದರು. ಇದೀಗ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಗೆದ್ದ ಕೇರಳದ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!