ಕನ್ನಡ ಚಲನಚಿತ್ರ ಮತ್ತು ಧಾರಾವಾಹಿ ಸಂಭಾಷಣೆಗಾರ, ಕಥೆಗಾರ ತೀರ್ಥಹಳ್ಳಿಯ ಮಾಳೂರಿನ ನಂದೀಶ್ ಜಿ.ಟಿ. (37) ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಂದೀಶ್ ಕನ್ನಡದ ಅನೇಕ ಧಾರಾವಾಹಿ ಹಾಗೂ ಸಿನಿಮಾಗಳಿಗೆ ಕಥೆ, ಸಂಭಾಷಣೆಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದರು. ಹಲವಾರು ಹೊಸ ನಟ, ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು.
ವಿಭಿನ್ನ ಕಥಾಹಂದರಗಳ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಂದೀಶ್ ಚಿತ್ತಾರ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದರು. ವಿಭಿನ್ನ ಕಥಾಹಂದರಗಳ ಮೂಲಕ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ನಂದೀಶ್ ಬುಧವಾರ ನಿಧನರಾಗಿರುವುದು ಕುಟುಂಬಸ್ಥರು ಹಾಗೂ ಚಿತ್ರರಂಗದವರಲ್ಲಿ ದುಃಖ ಮೂಡಿಸಿದೆ.
ನಂದೀಶ್ ತಾಯಿ, ಪತ್ನಿ ಹಾಗೂ ಇಬ್ಬರು ಪುಟಾಣಿ ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನೆರವೇರಲಿದೆ.





Be the first to comment