ಕರಾವಳಿ

ಕರಾವಳಿ ಸಿನಿಮಾಗೆ ಅಭಿಮಾನಿಗಳಿಂದ ಅದ್ಭುತ ರೆಸ್ಪಾನ್ಸ್

ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ಕರಾವಳಿ ಸಿನಿಮಾ ಇದೇ ಜುಲೈ ೨೪ ರಂದು ರಾಜ್ಯಾದ್ಯಂತ ತೆರೆಗೆ ಬರ್ತಿದೆ…ಸಿನಿಮಾ ಬಿಡುಗಡೆ ಆಗುವ ಮುನ್ನವೇ ಚಿತ್ರತಂಡ ರಾಜ್ಯದ ಪ್ರಮುಖ ಸಿಟಿಗಳಲ್ಲಿ ಪ್ರಿಮಿಯರ್ ಶೋ ಆರಂಭ ಮಾಡಿದ್ದಾರೆ..

ಮಂಗಳೂರು , ಶಿವಮೊಗ್ಗ , ದಾವಣಗೆರೆ ,ಮೈಸೂರು ಹಾಗೂ ಬೆಂಗಳೂರಿನಲ್ಲಿ ಸಿನಿಮಾ ಪ್ರಿಮಿಯರ್ ಆರಂಭ ಮಾಡಿದ್ದು ಸದ್ಯ ಮಂಗಳೂರು ಹಾಗೂ ಶಿವಮೊಗ್ಗ ಜನರು ಸಿನಿಮಾ ನೋಡಿ ತುಂಬಾ ಖುಷಿ ಪಟ್ಟಿದ್ದಾರೆ .ಮಂಗಳೂರಿನ ಜನರು ಎಮೋಷನಲಿ ಸಿನಿಮಾಗೆ ಕನೆಕ್ಟ್ ಆದ್ರೆ ಶಿವಮೊಗ್ಗ ಜನರು ಸಿನಿಮಾವನ್ನ ಸಖತ್ ಎಂಜಾಯ್ ಮಾಡಿದ್ರು..

ಸಿನಿಮಾದ ಮಹಾಬಲ ಹಾಗೂ ಮಾವೀರ ಪಾತ್ರವನ್ನ ಮೆಚ್ಚಿಕೊಂಡಾಡಿದ್ದಾರೆ…ಗುರುದತ್ ಗಾಣಿಗ ನಿರ್ದೇಶನ ಕಲಾವಿದರ ಆಕ್ಟಿಂಗ್ ಎಲ್ಲವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಪ್ರಿಮಿಯರ್ ಶೋ ನಲ್ಲಿ ಸಖತ್ ರೆಸ್ಪಾನ್ಸ್ ಪಡೆದುಕೊಳ್ತಿರೋ ಕರಾವಳಿ ಸಿನಿಮಾ ಜುಲೈ ೨೪ರಂದು ರಾಜ್ಯಾದ್ಯಂತ ತೆರೆಗೆ ಬರ್ತಿದೆ..

ಪ್ರಜ್ವಲ್ ದೇವರಾಜ್ ಮತ್ತುರಾಜ್ ಬಿ ಶೆಟ್ಟಿ ನಟನೆಯ ಕರಾವಳಿ ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬಂದಿದೆ. ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ನಾಯಕಿಯರಾಗಿ ಸಂಪದಾ, ಸುಷ್ಮಿತಾ ಬಣ್ಣ ಹಚ್ಚಿದ್ದಾರೆ. ಪ್ರಮುಖ ಪಾತ್ರದಲ್ಲಿ ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಸೇರಿದಂತೆ ಅನೇಕರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!