ನಟ ವಿಜಯ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದ ತಮಿಳು ನಟ ಜೈ ಅಲಿಯಾಸ್ ಜೈ ಸಂಪತ್ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ.
‘ನಾನು ಕೆಲವು ದೇವಾಲಯಗಳಲ್ಲಿ ಅವಮಾನಕಾರಿ ಅನುಭವಗಳನ್ನು ಎದುರಿಸಿದೆ. ಮಸೀದಿಗಳನ್ನು ಹೊರತುಪಡಿಸಿ ಬೇರೆ ಯಾವ ಸ್ಥಳದಲ್ಲಿ ವ್ಯಕ್ತಿಯಾಗಿ ಒಂದೇ ರೀತಿಯ ಗೌರವ ಸಿಕ್ಕ ಅನುಭವ ನನಗಿರಲಿಲ್ಲ. 2011ರಿಂದ ಇಸ್ಲಾಂ ಧರ್ಮವನ್ನು ಅನುಸರಿಸಲು ಆರಂಭಿಸಿದೆ. ನಾನು ಶೀಘ್ರದಲ್ಲೇ ಕಾನೂನಾತ್ಮಕವಾಗಿ ನನ್ನ ಹೆಸರನ್ನು ಬದಲಾಯಿಸಿಕೊಳ್ಳಲಿದ್ದೇನೆ’ ಎಂದು ಜೈ ಸಂದರ್ಶನದಲ್ಲಿ ಹೇಳಿದ್ದಾರೆ.
‘ನಾನು ಶಬರಿಮಲೆಗೆ ಮಾಲೆ ಧರಿಸಿ ಹೋಗಿದ್ದೆ. ಕ್ರಿಶ್ಚಿಯನ್ ಧರ್ಮದ ಆಚರಣೆಗಳನ್ನೂ ಪಾಲಿಸುತ್ತಿದ್ದೆ. ಎಲ್ಲಾ ದೇವರುಗಳೂ ಒಂದೇ ಎಂಬ ಭಾವನೆಯಿಂದ ಎಲ್ಲವನ್ನೂ ಗೌರವಿಸುತ್ತಿದ್ದೆ. ಆದರೆ ನನಗೆ ಕೆಲವು ದೇವಾಲಯಗಳಲ್ಲಿ ಅವಮಾನ ಎದುರಾಯಿತು. ನಾನು ನಿರೀಕ್ಷಿಸದ ಕೆಲವು ಘಟನೆಗಳು ತೀವ್ರ ಅಸಮಾಧಾನ ಮೂಡಿಸಿದವು. ಈ ಅನುಭವಗಳು ಪದೇ ಪದೇ ಮರುಕಳಿಸಿದಾಗ ನಾನು ಒಂದು ದಿನ ಮಸೀದಿಗೆ ಭೇಟಿ ನೀಡಿದೆ. ಮಸೀದಿಗೆ ಭೇಟಿ ನೀಡಿದಾಗ ಅಲ್ಲಿ ಸಮಾನತೆಯ ಭಾವನೆ ಸಿಕ್ಕಿತು’ ಎಂದಿದ್ದಾರೆ.
‘ಮೊದಲ ಬಾರಿಗೆ ಮಸೀದಿಗೆ ಹೋದಾಗ ಅಲ್ಲಿದ್ದ ಎಲ್ಲರಿಗೂ ನಾನು ಸಿನಿಮಾ ನಟ ಎಂಬ ವಿಷಯ ಗೊತ್ತಿತ್ತು. ಆದರೆ ಮಸೀದಿಯ ಒಳಗಿರುವಾಗ ನನ್ನ ಜೊತೆ ಯಾರೂ ಮಾತನಾಡಲು ಬರಲಿಲ್ಲ. ಯಾರೂ ನನ್ನ ಜೊತೆ ಫೋಟೋ ಅಥವಾ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳಲಿಲ್ಲ. ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಗೆ ಬಂದ ನಂತರವಷ್ಟೇ ಎಲ್ಲರೂ ನನ್ನನ್ನು ಮಾತಾಡಿಸಿದರು. ಇಸ್ಲಾಂ ಧರ್ಮದಲ್ಲಿ ಮಸೀದಿಯ ಒಳಗೆ ಹೋದರೆ ಎಲ್ಲರೂ ಸಮಾನರು. ಅಲ್ಲಿ ಅಲ್ಲಾಹ್ ಮಾತ್ರ ಸರ್ವೋಚ್ಚ. ಅಲ್ಲಿ ಯಾರೂ ಸೆಲೆಬ್ರಿಟಿಗಳಲ್ಲ ಎಂಬುದನ್ನು ಆ ಕ್ಷಣ ನಾನು ಮನಗಂಡೆ. ಆ ಒಂದು ಘಟನೆ ನನ್ನ ಸ್ವಭಾವವನ್ನೇ ಸಂಪೂರ್ಣವಾಗಿ ಬದಲಾಯಿಸಿತು.” ಎಂದು ಹೇಳಿದ್ದಾರೆ.
‘ ಸಮಾನತೆ ಮತ್ತು ಶಾಂತಿ ಇಸ್ಲಾಂ ಧರ್ಮವನ್ನು ಆಕರ್ಷಿಸಲು ಮತ್ತು ಅಪ್ಪಿಕೊಳ್ಳಲು ಮುಖ್ಯ ಕಾರಣ’ ಎಂದು ನಟ ಜೈ ಮುಕ್ತವಾಗಿ ಹೇಳಿದ್ದಾರೆ.
ವಿಜಯ್ ಮತ್ತು ಜೈ ಅವರು ‘ಭಗವತಿ’ ಸೂಪರ್ ಹಿಟ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಚಿತ್ರದಲ್ಲಿ ಜೈ ಅವರು ವಿಜಯ್ ಅವರ ಕಿರಿಯ ಸಹೋದರನ ಪಾತ್ರವನ್ನು ನಿರ್ಷಹಿಸಿದ್ದರು.
—–





Be the first to comment