‘ಜನನಾಯಗನ್’ ಭರ್ಜರಿ ಅಡ್ವಾನ್ಸ್‌ ಬುಕಿಂಗ್‌

ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ಅಭಿನಯದ ‘ಜನ ನಾಯಗನ್ ‘  ಸಿನಿಮಾಗೆ ಭರ್ಜರಿ ಅಡ್ವಾನ್ಸ್‌ ಬುಕಿಂಗ್‌  ಕಂಡು ಬಂದಿದೆ.

‘ಜನ ನಾಯಗನ್ ‘ ಸಿನಿಮಾ ಜುಲೈ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಮೊದಲ ದಿನದ ಮೊದಲ ಪ್ರದರ್ಶನದ ಟಿಕೆಟ್‌ಗಳು ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 800ರಿಂದ1,000 ರೂ.ವರೆಗೆ ಮಾರಾಟವಾಗುತ್ತಿದೆ. ತಮಿಳುನಾಡಿನಲ್ಲಿ  ಚಿತ್ರದ ಟಿಕೆಟ್ ದರ ಸರ್ಕಾರ ನಿಗದಿಪಡಿಸಿರುವ ಮಿತಿಯಂತೆ   190 ರೂ.ರೊಳಗೆ ಸೀಮಿತವಾಗಿದೆ.

ತಮಿಳುನಾಡಿನಲ್ಲಿ ಸಿನಿಮಾ ಟಿಕೆಟ್ ದರಗಳ ಮೇಲೆ ಸರ್ಕಾರದ ಕಟ್ಟುನಿಟ್ಟಿನ ನಿಯಂತ್ರಣ ಇದೆ. ದೊಡ್ಡ ಸ್ಟಾರ್ ಸಿನಿಮಾ ಬಿಡುಗಡೆಯಾದರೂ ಚಿತ್ರಮಂದಿರಗಳು ಸರ್ಕಾರ ಅನುಮತಿಸಿದ ದರಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡಲು ಅವಕಾಶವಿಲ್ಲ. ಕರ್ನಾಟಕ ಸರ್ಕಾರ ಚಿತ್ರಮಂದಿರಗಳಿಗೆ ಬೆಲೆ ನಿಗದಿಯಲ್ಲಿ ಸಡಿಲ ನೀತಿ ಅನುಸರಿಸುತ್ತಿದೆ.  ಬೇಡಿಕೆ ಹೆಚ್ಚಾದಾಗ ಪ್ರದರ್ಶಕರು ಅದರ ಲಾಭವನ್ನು ಪಡೆಯಬಹುದು. ಹಲವಾರು ಚಿತ್ರಮಂದಿರಗಳಲ್ಲಿ ಆರಂಭಿಕ ದಿನದ ಟಿಕೆಟ್‌ಗಳು ರೂ. 800 ರಿಂದ ರೂ. 1,000 ರವರೆಗೆ ಏರಿವೆ.

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಜನ ನಾಯಗನ್ ‘ ಚಿತ್ರ ಭಾರತದಾದ್ಯಂತ ಸುಮಾರು 1,500 ರಿಂದ 2,000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮುಂಬೈ ಮತ್ತು ಹೆಚ್ಚಿನ ತಮಿಳು ಮಾತನಾಡುವ ಪ್ರೇಕ್ಷಕರನ್ನು ಹೊಂದಿರುವ ಇತರ ನಗರಗಳಲ್ಲಿ ಬೆಳಗಿನ ಪ್ರದರ್ಶನಗಳಿಗೆ ತಯಾರಿ ನಡೆಸುತ್ತಿವೆ,

ಎಚ್ ವಿನೋತ್ ನಿರ್ದೇಶಿಸಿದ ಈ ಚಿತ್ರದಲ್ಲಿ ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಕಾಶ್ ರಾಜ್ ಮತ್ತು ಗೌತಮ್ ವಾಸುದೇವ್ ಮೆನನ್   ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!