ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಬೃಹತ್ ರಿಯಾಲಿಟಿ ಶೋ ‘ಬಿಗ್ ಬಾಸ್’ ಮೊದಲ ಬಾರಿಗೆ ಕನ್ನಡ ಸೇರಿದಂತೆ ಒಟ್ಟು ಆರು ಭಾಷೆಗಳ ಆವೃತ್ತಿಗಳು 2026ರ ಸೆಪ್ಟೆಂಬರ್‌ನಿಂದ ಏಕಕಾಲದಲ್ಲಿ ಪ್ರಸಾರವಾಗಲಿವೆ.
ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಬಾಂಗ್ಲಾ ಆವೃತ್ತಿಗಳು ಸೆಪ್ಟೆಂಬರ್‌ನಿಂದ ಜಿಯೋಸ್ಟಾರ್ ಟೆಲಿವಿಷನ್ ನೆಟ್‌ವರ್ಕ್ ಹಾಗೂ ‘ಜಿಯೋಹಾಟ್‌ಸ್ಟಾರ್’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಏಕಕಾಲದಲ್ಲಿ ಲೈವ್ ಬರಲಿವೆ.
ಈ ಬಾರಿಯೂ ಕಿಚ್ಚ ಸುದೀಪ್ ಕನ್ನಡ ಆವೃತ್ತಿಯನ್ನು ಮುನ್ನಡೆಸಲಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ನಾಗಾರ್ಜುನ, ಮಲಯಾಳಂನಲ್ಲಿ ಮೋಹನ್ ಲಾಲ್ ಅವರು ನಿರೂಪಕರಾಗಿ ಮುಂದುವರಿಯಲಿದ್ದಾರೆ. ಬಾಂಗ್ಲಾ ಆವೃತ್ತಿಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೊಸ ನಿರೂಪಕರಾಗಿ ಎಂಟ್ರಿ ಕೊಡುತ್ತಿದ್ದಾರೆ.
2025ರಲ್ಲಿ ಆರು ಭಾಷೆಗಳ ಬಿಗ್ ಬಾಸ್ ಒಟ್ಟಾರೆ 50 ಕೋಟಿಗೂ ಹೆಚ್ಚು ವೀಕ್ಷಕರನ್ನು ತಲುಪಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲೇ 30 ಕೋಟಿಗೂ ಹೆಚ್ಚು ಜನ ಬಿಗ್ ಬಾಸ್ ವೀಕ್ಷಿಸುತ್ತಾರೆ. ದಕ್ಷಿಣ ಭಾರತದ ಪ್ರತಿ 10ರಲ್ಲಿ 8 ಜನ ಬಿಗ್ ಬಾಸ್ ನೋಡುತ್ತಾರೆ.
ಬಿಗ್ ಬಾಸ್ ಜನಪ್ರಿಯತೆ ಹೆಚ್ಚಾದಂತೆ ಜಾಹೀರಾತುದಾರರ ಸಂಖ್ಯೆಯೂ ಹೆಚ್ಚಿದೆ. 2025ರಲ್ಲಿ 46 ವಿಭಾಗಗಳ 625ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಶೋ ಜೊತೆ ಕೈಜೋಡಿಸಿದ್ದವು. ಇದರಲ್ಲಿ 49 ಹೊಸ ಬ್ರ್ಯಾಂಡ್‌ಗಳೂ ಸೇರಿದ್ದವು.





Be the first to comment