ಹಳದಿ ಶಾಸ್ತ್ರದಲ್ಲಿ ಸ್ಪಂದನಾ ಸೋಮಣ್ಣ

ಕಿರುತೆರೆ ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರ ಮದುವೆಯ ಪೂರ್ವಭಾವಿ ಶಾಸ್ತ್ರಗಳು ಅದ್ಧೂರಿಯಾಗಿ ನಡೆಯುತ್ತಿದ್ದು, ಹಳದಿ ಶಾಸ್ತ್ರದ ಸಂಭ್ರಮದ ಕ್ಷಣಗಳು ಕಳೆ ತಂದಿವೆ.

ಸ್ಪಂದನಾ ಮದುವೆ ಪೂರ್ವ ಶಾಸ್ತ್ರಗಳ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸ್ಪಂದನಾ ಅವರ ಮನೆಯಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಹಳದಿ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. ಸ್ಪಂದನಾ ಮತ್ತು ವರುಣ್ ಪರಸ್ಪರ ಹಳದಿ ಹಚ್ಚಿಕೊಂಡು ಸಂಭ್ರಮಿಸಿದ್ದಾರೆ.

ಹಳದಿ ಶಾಸ್ತ್ರದ ಜೊತೆಗೆ ಸಂಗೀತ್ ಕಾರ್ಯಕ್ರಮ ಸಂಭ್ರಮದಿಂದ ನಡೆದಿದೆ. ವರುಣ್ ಜೊತೆ ಹೆಜ್ಜೆ ಹಾಕಿದ ಸ್ಪಂದನಾ ಭಾವುಕರಾಗಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದು, ನವಜೋಡಿಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಸ್ಪಂದನಾ ಮತ್ತು ವರುಣ್, ಕಳೆದ ಅಕ್ಟೋಬರ್‌ನಲ್ಲಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದರು. ಪ್ಯಾರಿಸ್‌ನ ಐಫೆಲ್ ಟವರ್ ಎದುರು ವರುಣ್ ಪ್ರಪೋಸ್ ಮಾಡಿದ್ದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.

ಮದುವೆಯ ಸಂಭ್ರಮದಲ್ಲಿರುವ ಸ್ಪಂದನಾ- ವರುಣ್ ಜೋಡಿ ತಮ್ಮ ಹಳದಿ ಶಾಸ್ತ್ರದ ಸಂಭ್ರಮವನ್ನು ಮೆಲುಕು ಹಾಕುತ್ತಾ ಸಂತಸ ಹಂಚಿಕೊಂಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!