ಶಿಶಿರ್–ಐಶ್ವರ್ಯ: ಮೊದಲು ಪ್ರಪೋಸ್ ಮಾಡಿದ್ದು ಯಾರು?

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗವಹಿಸಿದ್ದ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಶಿಂಧೋಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು,  ಮೊದಲು ಪ್ರಪೋಸ್ ಮಾಡಿದ್ದು ಯಾರು ಎಂಬ ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿದ್ದಾಗ ಇಬ್ಬರ ನಡುವೆ ಪ್ರೀತಿ ಹುಟ್ಟಿರಲಿಲ್ಲ. ಒಟ್ಟಿಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆರಂಭವಾದ ಪರಿಚಯ, ನಂತರ ಸ್ನೇಹವಾಗಿ ಬೆಳೆದಿತ್ತು. ಕಾಲಕ್ರಮೇಣ ಪರಸ್ಪರ ಆ ಸ್ನೇಹ ಪ್ರೀತಿಯಾಗಿ ಬದಲಾಗಿದೆ ಎಂದು ಶಿಶಿರ್ ಶಾಸ್ತ್ರಿ ಹೇಳಿದ್ದಾರೆ.

ತಾವು ಪ್ರೀತಿಸಿ ಮದುವೆಯಾಗುತ್ತೇವೆ ಎಂಬ ಕಲ್ಪನೆ  ಆರಂಭದಲ್ಲಿ ಇರಲಿಲ್ಲ. ಬಿಗ್‌ಬಾಸ್ ಮನೆಯಲ್ಲಿದ್ದಾಗ ಐಶ್ವರ್ಯ ಬಗ್ಗೆ ವಿಶೇಷ ಭಾವನೆ ಇದ್ದರೂ ಅದು ಪ್ರೀತಿಯಾಗಿರಲಿಲ್ಲ.  ಮೊದಲು ಪ್ರೀತಿಯನ್ನು ವ್ಯಕ್ತಪಡಿಸಿದ್ದು ಐಶ್ವರ್ಯ  ಎಂದು ಶಿಶಿರ್ ಬಹಿರಂಗಪಡಿಸಿದ್ದಾರೆ.

ತಾವಿಬ್ಬರೂ ಮದುವೆಯಾಗುತ್ತೇವೆ ಎಂದು ಆರಂಭದಲ್ಲಿ ಯೋಚಿಸಿರಲಿಲ್ಲ. ಆದರೆ ತಮ್ಮಿಬ್ಬರ ಮದುವೆ ಕುರಿತು ಸುತ್ತಮುತ್ತಲಿನವರು ಮೊದಲೇ ಮಾತನಾಡಲು ಆರಂಭಿಸಿದ್ದರು. ಆರಂಭದಲ್ಲಿ ಶಿಶಿರ್ ಬಗ್ಗೆ ಪ್ರೀತಿಯ ಭಾವನೆ ಇರಲಿಲ್ಲ. ಆದರೆ ಅವರ ಒಳ್ಳೆಯ ಗುಣಗಳು ಹಾಗೂ ಮಾನವೀಯತೆಯ ಬಗ್ಗೆ ಅಪಾರ ಗೌರವವಿತ್ತು. ವಿಶೇಷವಾಗಿ ಶಿಶಿರ್ ತೋರಿಸಿದ ಕಾಳಜಿ  ತಮ್ಮ ಮನಸ್ಸನ್ನು ಗೆದ್ದಿತು ಎಂದು ಐಶ್ವರ್ಯ ಹೇಳಿದ್ದಾರೆ.

ನಿಶ್ಚಿತಾರ್ಥದ ಬೆನ್ನಲ್ಲೇ ಶಿಶಿರ್–ಐಶ್ವರ್ಯ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳು ಹರಿದು ಬರುತ್ತಿವೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!