ಆ್ಯಮಿ ಪ್ರಶಸ್ತಿ: ಭಾರತಕ್ಕೆ ನಿರಾಸೆ

ಪ್ರತಿಷ್ಠಿತ ಅಂತಾರಾಷ್ಟ್ರೀಯ ಆ್ಯಮಿ ಪ್ರಶಸ್ತಿ ವೇದಿಕೆಯಲ್ಲಿ ಭಾರತ ಈ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ.

ಹಾಸ್ಯ ವಿಭಾಗದಲ್ಲಿ ವೀರ್ ದಾಸ್ ಅವರ ಶೋ, ಅತ್ಯುತ್ತಮ ಡ್ರಾಮಾ ಸರಣಿ ವಿಭಾಗದಲ್ಲಿ ‘ರಿಯಲ್ ಕಾಶ್ಮೀರ್ ಫುಟ್ಬಾಲ್ ಕ್ಲಬ್’   ಪ್ರಶಸ್ತಿಯಿಂದ ವಂಚಿತವಾಗಿದೆ. 2023ರಲ್ಲಿ ‘ಲ್ಯಾಂಡಿಂಗ್’ ಕಾರ್ಯಕ್ರಮಕ್ಕಾಗಿ ವೀರ್ ದಾಸ್ ಆ್ಯಮಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಈ ಬಾರಿ ಮತ್ತೊಂದು ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಫಲಿತಾಂಶ ನಿರಾಸೆ ತಂದಿದೆ.

ಮಹೇಶ್ ಮಥಾಯ್ ಮತ್ತು ರಾಜೇಶ್ ಮಾಪುಸ್ಕರ್ ನಿರ್ದೇಶನದ ಸೋನಿ ಲಿವ್‌ನ ‘ರಿಯಲ್ ಕಾಶ್ಮೀರ್ ಫುಟ್ಬಾಲ್ ಕ್ಲಬ್’ ಸರಣಿ ಅತ್ಯುತ್ತಮ ಡ್ರಾಮಾ ವಿಭಾಗದಲ್ಲಿ ಸ್ಪರ್ಧಿಸಿತ್ತು. ಬ್ರಿಟನ್, ಫ್ರಾನ್ಸ್ ಮತ್ತು ಅರ್ಜೆಂಟೀನಾದ ಸರಣಿಗಳೊಂದಿಗೆ ಪೈಪೋಟಿ ನಡೆಸಿದ  ಭಾರತೀಯ ಸರಣಿಗೆ ಪ್ರಶಸ್ತಿ ಒಲಿಯಲಿಲ್ಲ. ಫ್ರಾನ್ಸ್‌ನ ‘ಕ್ಯಾರೆಮ್’ ಸರಣಿ ವಿಜೇತವಾಗಿ ಹೊರಹೊಮ್ಮಿತು.

‘ರಿಯಲ್ ಕಾಶ್ಮೀರ್ ಫುಟ್ಬಾಲ್ ಕ್ಲಬ್’ ಸರಣಿಯಲ್ಲಿ ಮೊಹಮ್ಮದ್ ಜೀಶನ್ ಅಯೂಬ್ ಮತ್ತು ಮಾನವ್ ಕೌಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮೊದಲ ವೃತ್ತಿಪರ ಫುಟ್ಬಾಲ್ ತಂಡವನ್ನು ಕಟ್ಟುವ ನೈಜ ಕಥೆಯನ್ನು ಈ ಸರಣಿ ಆಧರಿಸಿದೆ.

ಈ ಬಾರಿ ಎರಡು ಭಾರತೀಯ ಕೃತಿಗಳು ನಾಮನಿರ್ದೇಶನಗೊಂಡಿದ್ದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದಿರುವುದು ಭಾರತೀಯ ಮನರಂಜನಾ ಕ್ಷೇತ್ರಕ್ಕೆ ನಿರಾಸೆ ತಂದಿದೆ. ಸಮಾರಂಭದಲ್ಲಿ ನಟ ವಿಜಯ್ ಸೇತುಪತಿ ಭಾಗವಹಿಸಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!