ಸನ್ನಿ ಡಿಯೋಲ್ ಪುತ್ರನ ಜತೆ ಸಚಿನ್ ಪುತ್ರಿ ಮದುವೆ?

ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಪುತ್ರ ರಾಜ್‌ವೀರ್ ಜತೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮದುವೆ ಆಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸಾರಾ ತೆಂಡೂಲ್ಕರ್ ಮತ್ತು ರಾಜ್‌ವೀರ್ ಡಿಯೋಲ್ ಅವರು 2027ರಲ್ಲಿ ವಿವಾಹವಾಗಬಹುದು ಎಂಬ ಪೋಸ್ಟ್ ವೈರಲ್ ಆಗಿ ಇಬ್ಬರ ಮದುವೆಯ ಕುರಿತಾದ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಎಕ್ಸ್ ಖಾತೆಯಲ್ಲಿ ಮಾಡಲಾದ ಪೋಸ್ಟ್ ನಲ್ಲಿ ರಾಜ್‌ವೀರ್ ಡಿಯೋಲ್ ಅವರು ಸಾರಾ ಅವರಿಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. 2027ರ ವೇಳೆಗೆ ಇವರಿಬ್ಬರ ಮದುವೆ ನಡೆಯಬಹುದು ಎಂದು ಹೇಳಲಾಗಿದೆ. ಈ ರೀತಿಯ ವದಂತಿಗಳು ರೆಡ್ಡಿಟ್ ವೇದಿಕೆಯಲ್ಲೂ ಹರಿದಾಡುತ್ತಿವೆ.

ಇನ್ನೊಬ್ಬರು ಪೋಸ್ಟ್ ನಲ್ಲಿ ಸನ್ನಿ ಡಿಯೋಲ್ ಅವರ ಮಗ ರಾಜ್‌ವೀರ್ ಡಿಯೋಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರ ಮದುವೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಮುಂದುವರೆದರೆ ಅದು ಭಾರತದ ಎರಡು ಪ್ರತಿಷ್ಠಿತ ಕುಟುಂಬಗಳನ್ನು ಒಟ್ಟಿಗೆ ತರಬಹುದು ಎನ್ನುವ ಚರ್ಚೆ ನಡೆಯುತ್ತಿದೆ.


__

Be the first to comment

Leave a Reply

Your email address will not be published. Required fields are marked *

Translate »
error: Content is protected !!