ಫಾರ್ಮುಲಾ ಕಾರು ಚಲಾಯಿಸಿದ ಸುದೀಪ್

ಅಭಿನಯದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಕಿಚ್ಚ ಸುದೀಪ್ ಫಾರ್ಮುಲಾ ರೇಸಿಂಗ್  ಕಾರು ಚಲಾಯಿಸಿ ಗಮನ ಸೆಳೆದಿದ್ದಾರೆ.

ಫಾರ್ಮುಲಾ ಕಾರು ಚಲಾಯಿಸಿದ ಫೋಟೋ ಮತ್ತು ವಿಡಿಯೋಗಳನ್ನು  ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದೊಂದಿಗೆ ರೇಸಿಂಗ್ ಟ್ರ್ಯಾಕ್‌ಗೆ ತೆರಳಿದ್ದ ಸುದೀಪ್, ರೇಸರ್‌ನ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೆಲ್ಮೆಟ್ ಮತ್ತು ಸುರಕ್ಷತಾ ಗೇರ್ ಧರಿಸಿ ಕಾರಿನ ಕಾಕ್‌ಪಿಟ್‌ನಲ್ಲಿ ಕುಳಿತು ಥಂಬ್ಸ್‌ಅಪ್ ತೋರಿಸಿ ಫೋಟೋ ಹಂಚಿಕೊಂಡಿದ್ದಾರೆ.

‘ಈ ಅನುಭವವನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ. ಇದು ತಮ್ಮ ಜೀವನದ ಅತ್ಯದ್ಭುತ ಡ್ರೈವಿಂಗ್ ಅನುಭವಗಳಲ್ಲಿ ಒಂದು’  ಎಂದು ಸುದೀಪ್ ಬರೆದುಕೊಂಡಿದ್ದಾರೆ.

ಟ್ರ್ಯಾಕ್‌ಗೆ ಇಳಿಯುವ ಮೊದಲು ರೇಸಿಂಗ್ ಕಾರಿನ ಕಾರ್ಯವೈಖರಿ, ತಾಂತ್ರಿಕ ಅಂಶಗಳು ಮತ್ತು ಚಾಲನೆಯ ವೇಳೆ ಪಾಲಿಸಬೇಕಾದ ನಿಯಮಗಳ ಬಗ್ಗೆ ತಜ್ಞರಿಂದ ಸಂಪೂರ್ಣ ಮಾಹಿತಿ ಪಡೆದೆ. ಅಲ್ಲಿನ ಮೂಲಸೌಕರ್ಯ ಮತ್ತು ರೇಸಿಂಗ್ ವಾತಾವರಣ ಬೆರಗುಗೊಳಿಸಿದೆ ಎಂದು ಹೇಳಿದ್ದಾರೆ.

ನವೆಂಬರ್ 28, 29ರಂದು ನೋಯ್ಡಾದ ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಮುಂದಿನ ರೇಸ್ ನಡೆಯಲಿದೆ. ಡಿಸೆಂಬರ್ 5,  6ರಂದು ನವಿ ಮುಂಬೈ ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿ ಸ್ಪರ್ಧೆ ಆಯೋಜನೆಯಾಗಿದೆ. ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡಕ್ಕೆ ಮುಂಬರುವ ಸ್ಪರ್ಧೆಗಳಲ್ಲಿ ಯಶಸ್ಸು ಸಿಗಲಿ ಎಂದು ಸುದೀಪ್  ಶುಭ ಹಾರೈಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!