ಊರಬ್ಬ

ಜು. 19ರಂದು ‘ಊರಬ್ಬ’ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ಕುಣಿಗಲ್ ತಾಲ್ಲೂಕಿನ ಸುಪ್ರಸಿದ್ದ ಉಜ್ಜಿನಿ ಚೌಡೇಶ್ವರಿ ಜಾತ್ರೆ, ಅದರ ಹಿನ್ನೆಲೆಯಲ್ಲಿ ನಡೆಯುವ ಒಂದಷ್ಟು ಘಟನೆಗಳನ್ನಿಟ್ಟುಕೊಂಡು 90 ಖ್ಯಾತಿಯ ನಿರ್ದೇಶಕ ಲಕ್ಕಿ ಶಂಕರ್ ಅವರು “ಊರಬ್ಬ” ಎಂಬ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಇದೇ 19ರಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ ಈ ಚಿತ್ರವನ್ನು ಒನ್ಸ್ ಮೋರ್ ಕೌರವ ಖ್ಯಾತಿಯ ನರೇಶ್‌ಗೌಡ ಅವರು ನಿರ್ಮಾಣ ಮಾಡಿದ್ದಾರೆ. ಜತೆಗೆ ಚಿತ್ರದ ನಾಯಕನಾಗಿಯೂ ಸಹ ನಟಿಸಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿ ಸಾರಾ‌. ಮಹೇಶ್ ಅವರ ಪತ್ನಿ ಅನಿತಾ ಸಾರಾ.ಮಹೇಶ್ಅವರು ದೇವಿ ಹಾಡಿಗೆ ದನಿಯಾಗಿದ್ದಾರೆ.

ದೊಡ್ಡಣ್ಣ, ತನಿಷಾ ಕುಪ್ಪಂಡ, ಪಾಯಲ್ ಚಂಗಪ್ಪ, ಸಿದ್ದು ಮೂಲಿಮನಿ, ಮಿಮಿಕ್ರಿ ಗೋಪಿ, ಬಿರಾದಾರ್. ಮಿತ್ರ, ಅರವಿಂದ್‌ರಾವ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರತಂಡ ರಾಜ್ಯಾದ್ಯಂತ ಸಂಚರಿಸಿ ಚಿತ್ರದ ಪ್ರಚಾರ ಕಾರ್ಯ ನಡೆಸಿದೆ.

ಈ ಚಿತ್ರದಲ್ಲಿ ಉಜ್ಜಿನಿ ಚೌಡೇಶ್ವರಿ ಜಾತ್ರೆಯ ನೈಜ ದೃಶ್ಯಗಳನ್ನು ನಿರ್ದೇಶಕರಾದ ಎಂ.ಡಿ. ಶ್ರೀಧರ್, ಹೆಚ್.ವಾಸು, ಎ.ವಿ.ಕೃಷ್ಣಕುಮಾರ್, ಬಾಹುಬಲಿ, ಈಶ್ವರ್ ಹೀಗೆ ಐವರು ಡೈರೆಕ್ಟರ್‌ಗಳು 8 ಕ್ಯಾಮೆರಾ ಬಳಸಿ ಸೆರೆಹಿಡಿದಿದ್ದಾರೆ.

ಊರಬ್ಬ

ಯುಗಾದಿ ಹಬ್ಬ ನಡೆದ 15 ದಿನಗಳ ನಂತರ ಚೌಡೇಶ್ವರಿ ಜಾತ್ರೆ ಪ್ರಾರಂಭವಾಗುತ್ತೆ. ಡೈಲಾಗ್, ಚಿತ್ರಕಥೆ ಬರೆದಿರುವ ವಾಸು, ಶ್ರೀಧರ್ ಅವರುಗಳ ಸಲಹೆ ತಗೊಂಡು ಇಡೀ ಜಾತ್ರೆಯನ್ನು ಲೈವ್ ಆಗಿ ಶೂಟ್ ಮಾಡಿದ್ದೇವೆ. ಇಂಥ ಪ್ರಯತ್ನ ಭಾರತ ಚಿತ್ರರಂಗದಲ್ಲೇ ಮೊದಲು ಎಂದು ನಿರ್ದೇಶಕ ಲಕ್ಕಿ ಶಂಕರ್ ಹೇಳಿದ್ದಾರೆ.

ಈ ಜಾತ್ರೆಯಲ್ಲಿ ತುಂಬಾ ವಿಶೇಷಗಳಿವೆ. ಆರು ಜನ ದಲಿತರಿಗೆ ಜನಿವಾರ ಹಾಕಿ ಬ್ರಾಹ್ಮಣರನ್ನಾಗಿ ಮಾಡಿ, ಅವರಿಂದ ಅಗ್ನಿಕುಂಡವನ್ನು ದಾಟಿಸುತ್ತಾರೆ.

ಆಯುಷ್ ಎಂಟರ್‌ಪ್ರೈಸಸ್ ಮೂಲಕ ನರೇಶ್‌ಗೌಡ್ರು ಅವರ ನಿರ್ಮಾಣದ ಈ ಚಿತ್ರದಲ್ಲಿ ಅರವಿಂದ ರಾವ್, ಬಿರಾದಾರ್, ಸಿದ್ದು ಮೂಲಿಮನಿ, ಮಿತ್ರ, ದೊಡ್ಡಣ್ಣ, ತನಿಷಾ ಕುಪ್ಪಂಡ, ಪಾಯಲ್ ಚಂಗಪ್ಪ, ಮಿಮಿಕ್ರಿ ಗೋಪಿ, ಡಾ.ನಂಜಪ್ಪ ಹೀಗೆ ಕಲಾವಿದರ ದಂಡೇ ಇದೆ. ಅಕ್ಷಯ್ ಎಸ್.ರಿಶಭ್ ಅವರ ಸಂಗೀತ, ಕೃಷ್ಣಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!