ಮೋಡ ಕವಿದ ವಾತಾವರಣ

ಮೋಡ ಕವಿದ ವಾತಾವರಣ ಸಿನಿಮಾದ ಹೀರೋ ಟೀಸರ್ ರಿಲೀಸ್

ಒಂದು ಸರಳ ಪ್ರೇಮಕಥೆ ಸಿನಿಮಾ ಬಳಿಕ ನಿರ್ದೇಶಕ ಸಿಂಪಲ್ ಸುನಿಭತ್ತಳಿಕೆಯಿಂದ ಬರ್ತಿರುವ ಮತ್ತೊಂದು ಸೊಗಸಾದ ಪ್ರೇಮ ಕಥೆ ಮೋಡ ಕವಿದ ವಾತಾವರಣ. ಟೈಟಲ್ ನಿಂದ ಗಮನ ಸೆಳೆಯುತ್ತಿರುವ ಈ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ತಿಂಗಳ 26ಕ್ಕೆ ಬಿಡುಗಡೆಯಾಗುತ್ತಿರುವ ಮೋಡ ಕವಿದ ವಾತಾವರಣ ಚಿತ್ರದ ಪ್ರಚಾರ ಕೆಲಸ ಜೋರಾಗಿದೆ. ಅದರ ಭಾಗವಾಗಿ ಚಿತ್ರದ ಹೀರೋ ಟೀಸರ್ ಬಿಡುಗಡೆ ಮಾಡಲಾಗಿದೆ.

ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ಮೋಡ ಕವಿದ ವಾತಾವರಣ ಸಿನಿಮಾದ ಹೀರೋ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಉಪಸ್ಥಿತರಿದ್ದರು. ಈ ವೇಳೆ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಮೋಡ ಕವಿದ ವಾತಾವರಣ ನನ್ನ ಜೀವನದ ಸ್ಪೆಷಲ್ ಸಿನಿಮಾ. ನಾನು ಟ್ರೇಲರ್ ಚೆನ್ನಾಗಿ ಕಟ್ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಆದ್ರೆ ಈ ಚಿತ್ರದ ಚಾಲೆಂಜ್ ಏನೂ ಎಂದರೆ ಟ್ರೇಲರ್ ಕಟ್ ಚೆನ್ನಾಗಿ ಮಾಡಲು ಆಗುವುದಿಲ್ಲ ಎನ್ನುವುದು ಗೊತ್ತು. ಚಿತ್ರದ ಅರ್ಧ ಪಾರ್ಟ್ ನಾನು ಥಿಯೇಟರ್ ನಲ್ಲೇ ರಿವೀಲ್ ಮಾಡುವುದು. ಸಿನಿಮಾದಲ್ಲಿ ಏನೋ ಒಂದು ಅಂಶವಿದೆ. ಅದನ್ನು ಥಿಯೇಟರ್ ನಲ್ಲಿಯೇ ನೋಡಬೇಕು. ಹೀಗಾಗಿ ಅರ್ಧ ಸಿನಿಮಾದಲ್ಲಿ ಟ್ರೇಲರ್ ಕಟ್ ಮಾಡಬೇಕು. ನಾಯಕ ಶೀಲಮ್ ಚೆನ್ನಾಗಿ ನಟಿಸಿದ್ದಾರೆ. ಒಂದು ಸರಳ ಪ್ರೇಮ ಕಥೆ ಆದ್ಮೇಲೆ ನಿರ್ಮಾಪಕ ರಮೇಶ್ ಸರ್ ನಮ್ಮ ಟೀಂ ಜೊತೆ ಕೈ ಜೋಡಿಸಿರುವುದಕ್ಕೆ ಪಾಸಿಟಿವ್ ವೈಬ್ಸ್ ಇದೆ. ಇದೇ ತಿಂಗಳ 26ಕ್ಕೆ ಸಿನಿಮಾ ಬಿಡುಗಡೆಯಾಗ್ತಿದೆ. ಪ್ರೇಕ್ಷಕರು ನೋಡಿ ಹಾರೈಸಬೇಕು ಎಂದರು.

ಮೋಡ ಕವಿದ ವಾತಾವರಣ

ನಾಯಕ ಶೀಲಮ್ ಮಾತನಾಡಿ, ಮೋಡ ಕವಿದ ವಾತಾವರಣ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದೇನೆ. ಹೀರೋ ಟೀಸರ್ ಎಲ್ಲರಿಗೂ ಇಷ್ಟವಾಗಿದೆ ಎಂದುಕೊಳ್ಳುತ್ತೇನೆ. ಹೀರೋ ಎಂದರೆ ಪವಾಡ. ಯಾಕೆಂದರೆ ಎಲ್ಲರೂ ಹೀರೋ ಆಗಲು ಆಗುವುದಿಲ್ಲ. ಎಷ್ಟೇ ದುಡ್ಡಿದ್ದರು, ಎಷ್ಟೇ ಆಕ್ಟಿಂಗ್ ಸ್ಕಿಲ್ ಇದ್ದರೂ ಆಗಲು ಆಗುವುದಿಲ್ಲ. ಡ್ಯಾನ್ಸ್, ಫೈಟ್ ಬರುತ್ತೆ. ನೋಡಲು ಚೆನ್ನಾಗಿದ್ದರೂ ಆಗಲ್ಲ. ಆದರೆ ಎಲ್ಲವನ್ನೂ ದಾಟಿ ಪವಾಡ ಆಗಬೇಕು. ನನ್ನ ಜೀವನದಲ್ಲಿ ಅದು ಆಗಿದೆ. ಇದಕ್ಕೆ ಕಾರಣ ಸುನಿ ಸರ್. ನನ್ನ ಸಿನಿ ಜರ್ನಿಯಲ್ಲಿ ಏನೇ ಸಾಧಿಸಿದ್ದರು ನಾನು ಆ ಕ್ರೆಡಿಟ್ ಅವರಿಗೆ ಕೊಡುತ್ತೇನೆ. ನಿರ್ಮಾಪಕ ರಮೇಶ್ ಸರ್ ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಚಿತ್ರರಂಗದಲ್ಲಿ ಸ್ಟಾರ್ಸ್ ಸಿನಿಮಾ ಗೆಲ್ಲಬೇಕು. ಈ ಟೀಮ್ ಸೂಪರ್ ಸ್ಟಾರ್ಸ್ ಗೆ ಸಿನಿಮಾ ಮಾಡುವ ತಂಡ. ಆದರೆ ನನ್ನನ್ನು ಹಾಕಿಕೊಂಡು ಚಿತ್ರ ಮಾಡಿದ್ದಾರೆ. ಅದು ನನ್ನ ಪುಣ್ಯ. ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು.

ಮೋಡ ಕವಿದ ವಾತಾವರಣ

ಈ ಚಿತ್ರದ ಮೂಲಕ ಸುನಿ ತಮ್ಮ ಗರಡಿ ಹುಡ್ಗ ಶೀಲಮ್ ಅವರನ್ನು ಚಿತ್ರರಂಗಕ್ಕೆ ನಾಯಕನಾಗಿ ಪರಿಚಯ ಮಾಡುತ್ತಿದ್ದಾರೆ. ಶೀಲಮ್‌ ಅವರು ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ʼಮೋಡ ಕವಿದ ವಾತಾವರಣʼದ ಮೂಲಕ‌ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಸೈಂಟಿಫಿಕ್‌ ಫಿಕ್ಷನ್‌ ಲವ್ ಸ್ಟೋರಿ ಹೊಂದಿರುವ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ.

‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್‌ ಮೂವೀಸ್ ಅವರೆ ಈ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ. ಮೋಡ ಕವಿದ ವಾತಾವರಣ ಸಿನಿಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕಶ್ಯಪ್ ಸಂಕಲನ‌ ಸಿನಿಮಾಗಿದೆ.

ಮೋಡ ಕವಿದ ವಾತಾವರಣ

Be the first to comment

Leave a Reply

Your email address will not be published. Required fields are marked *

Translate »
error: Content is protected !!