ದುನಿಯಾ ವಿಜಯ್ ವಿಲನ್ ಅವತಾರಕ್ಕೆ ಮೆಚ್ಚುಗೆ

ಇದೇ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ನಟಿಸಿರುವ ದುನಿಯಾ ವಿಜಯ್ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ನಯನತಾರಾ ಅಭಿನಯದ ‘ಮೂಕುತ್ತಿ ಅಮ್ಮನ್ 2’ ಚಿತ್ರದ ಮೂಲಕ ದುನಿಯಾ ವಿಜಯ್ ತಮಿಳು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ನವೆಂಬರ್ 6ರಂದು ಬಿಡುಗಡೆಯಾದ  ವಿಜಯ್ ಅವರ ಅಭಿನಯಕ್ಕೆ ಸಿನಿಮಾ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಕೆಲವು ದೃಶ್ಯಗಳ ರೀಲ್ಸ್‌ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹಿರಿಯ ನಿರ್ದೇಶಕ ಸುಂದರ್ ಸಿ ನಿರ್ದೇಶನದ ಈ ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಒಂದೇ ಸಿನಿಮಾದಲ್ಲಿ ಎರಡು ವಿಭಿನ್ನ ಲುಕ್‌ಗಳೊಂದಿಗೆ ಅವರು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ರೆಜಿನಾ ಕೆಸಾಂಡ್ರಾ ಅವರೊಂದಿಗೆ ವಿಜಯ್ ಕೂಡ ಪ್ರಮುಖ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.

ವಿಜಯ್  ಮುಂದಿನ ದಿನಗಳಲ್ಲಿ ‘ಸ್ಲಂ ಡಾಗ್: 33 ಟೆಂಪಲ್ ರೋಡ್’ ಚಿತ್ರದ ಮೂಲಕ  ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ಟಬು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ಇದೇ ತಿಂಗಳು ಬಿಡುಗಡೆಯಾಗಲಿದೆ.

ಕನ್ನಡ ಚಿತ್ರರಂಗದಲ್ಲಿ ನಾಯಕ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿರುವ ದುನಿಯಾ ವಿಜಯ್, ಈ ಹಿಂದೆ ನಂದಮೂರಿ ಬಾಲಕೃಷ್ಣ ಅಭಿನಯದ ತೆಲುಗಿನ ‘ವೀರ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಅಭಿನಯಕ್ಕಾಗಿ ಅವರಿಗೆ ಸೈಮಾ ಪ್ರಶಸ್ತಿಯೂ ಲಭಿಸಿತ್ತು.

—

Be the first to comment

Leave a Reply

Your email address will not be published. Required fields are marked *

Translate »
error: Content is protected !!