ಟಾಲಿವುಡ್ ಪವರ್ ಸ್ಟಾರ್ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪತ್ನಿ ಅನ್ನಾ ಕೊನಿಡೆಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಈ ಹಿಂದೆ ಪವನ್ ಕಲ್ಯಾಣ್ ಅವರ ನಾಲ್ಕನೇ ಮದುವೆಯ ಕುರಿತು ನುಡಿದಿದ್ದ ಭವಿಷ್ಯದ ವಿಡಿಯೋ ವೈರಲ್ ಆಗುತ್ತಿದೆ.
ಪವನ್ ಕಲ್ಯಾಣ್ ಮತ್ತು ಅನ್ನಾ ಕೊನಿಡೆಲಾ ಪರಸ್ಪರ ಒಪ್ಪಿಗೆಯೊಂದಿಗೆ ಪ್ರತ್ಯೇಕವಾಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯ ಚರ್ಚೆಗಳು ನಡೆಯುತ್ತಿರುವಾಗಲೇ ವೇಣುಸ್ವಾಮಿ ತಮ್ಮ ಹಳೆಯ ಸಂದರ್ಶನದ ವಿಡಿಯೋವನ್ನು ಮತ್ತೆ ಹಂಚಿಕೊಂಡಿದ್ದಾರೆ.
2023ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ವೇಣುಸ್ವಾಮಿ, ಪವನ್ ಕಲ್ಯಾಣ್ ಅವರ ಜಾತಕದಲ್ಲಿ ಗುರು ಉನ್ನತ ಸ್ಥಾನದಲ್ಲಿದ್ದಾರೆ. ಗ್ರಹಗಳ ಸ್ಥಾನವನ್ನು ಆಧರಿಸಿ ವ್ಯಕ್ತಿಯ ವೈವಾಹಿಕ ಜೀವನದ ಕುರಿತು ಅಂದಾಜು ಮಾಡಬಹುದು. ಈಗಾಗಲೇ ಮೂರು ಮದುವೆಯಾಗಿರುವ ಪವನ್ ಕಲ್ಯಾಣ್ ಅವರಿಗೆ ಮತ್ತೊಂದು ಮದುವೆಯಾಗುವ ಸಾಧ್ಯತೆಯಿದೆ ಎಂದು ಜ್ಯೋತಿಷ್ಯದ ಆಧಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ತಮ್ಮ ಹೇಳಿಕೆಗೆ ಟೀಕೆಗಳು ಎದುರಾಗಬಹುದು. ಯಾರೊಬ್ಬರೂ ಉದ್ದೇಶಪೂರ್ವಕವಾಗಿ ಇಂತಹ ಘಟನೆಗಳನ್ನು ಬಯಸುವುದಿಲ್ಲ. ಆದರೆ ಜಾತಕದ ಪ್ರಕಾರ ಪವನ್ ಕಲ್ಯಾಣ್ ಅವರಿಗೆ ನಾಲ್ಕನೇ ಮದುವೆಯ ಯೋಗವಿದೆ. 2024ರ ಜೂನ್‌ವರೆಗೆ ಪವನ್ ಕಲ್ಯಾಣ್ ಅವರಿಗೆ ಮತ್ತೊಂದು ಮದುವೆಯಾಗುವ ಅವಕಾಶವಿಲ್ಲ ಎಂದು ಹೇಳಿದ್ದರು.
—





Be the first to comment