ಮಹಾನ್ ಮೌನ

Movie Review : ಪ್ರೇಮದ ಮಹಾನ್ ಮೌನ ‘ಆಸ್ಟಿನ್ ನ ಮಹನ್ಮೌನ’

ಚಿತ್ರ: ಆಸ್ಟಿನ್ ನ ಮಹನ್ಮೌನ

ನಿರ್ದೇಶನ : ವಿನಯ್ ಕುಮಾರ್ ವೈದ್ಯನಾಥನ್
ನಿರ್ಮಾಣ : ಎವಿವಿ ಪ್ರೊಡಕ್ಷನ್ಸ್
ತಾರಾಬಳಗ : ವಿನಯ್ ಕುಮಾರ್ ವೈದ್ಯನಾಥನ್, ರಿಷಾ ಗೌಡ, ಪ್ರಕೃತಿ ಪ್ರಸಾದ್, ಜಗಪ್ಪ, ಇತರರು.
ರೇಟಿಂಗ್ : 3.5/5

ಸಮುದ್ರ ತೀರದ ಕ್ರಿಶ್ಚಿಯನ್ ಯುವ ಜೋಡಿಯ ನಿಷ್ಕಲ್ಮಶ ಪ್ರೀತಿಯ ಜೊತೆಗೆ ಮಹಾನ್ ಮೌನದ ಕಥಾ ಹಂದರ ಹೊಂದಿದ ಚಿತ್ರ ಈ ವಾರ ಬಿಡುಗಡೆ ಆಗಿರುವ ಆಸ್ಟಿನ್ ನ ಮಹನ್ಮೌನ.

ಚಿತ್ರದ ನಾಯಕಿಯ ತಂದೆ ತನ್ನ ಮಗಳ ಪ್ರೇಮದ ವಿಚಾರ ತಿಳಿದು ಮಗಳನ್ನು ಮನೆಯಲ್ಲಿ ಕೂಡಿ ಹಾಕುತ್ತಾನೆ. ಇತ್ತ ಮಗನ ಪರದಾಟ ನೋಡುವ ತಂದೆ ನಾಯಕಿಯ ಮನೆಗೆ ಹೋಗಿ ಅವಳ ತಂದೆಯ ಬಳಿ ಮಾತನಾಡಿದರೂ ಯಾವುದೇ ಪ್ರಯೋಜನ ಆಗುವುದಿಲ್ಲ. ಮುಂದೆ ಆಸ್ಪತ್ರೆ ಸೇರುವ ನಾಯಕನನ್ನು ಅಲ್ಲಿಯ ಡಾಕ್ಟರ್ ಪ್ರೀತಿಸಲು ನಿರ್ಧರಿಸುತ್ತಾಳೆ. ಮನೆಯವರ ಒಪ್ಪಿಗೆಯಂತೆ ಇಬ್ಬರು ನೆಮ್ಮದಿಯ ಬದುಕು ಸಾಗಿಸುತ್ತಿರುವಾಗ ಕಾಣದ ಮೌನದ ಕಠೋರ ಸತ್ಯ ಎದುರಾಗುತ್ತದೆ. ಇದು ಏನು ಎನ್ನುವುದನ್ನು ತಿಳಿಯಲು ಚಿತ್ರಮಂದಿರಕ್ಕೆ ತೆರಳಬೇಕಿದೆ.

ನಿರ್ದೇಶಕರು ಚಿತ್ರದಲ್ಲಿ ಮಾನವೀಯ ಮೌಲ್ಯದ ಜೊತೆಗೆ ದುಷ್ಟರಿಗೆ ಪ್ರತ್ಯುತ್ತರ ನೀಡುವ ಕಥೆಯನ್ನು ಚಿತ್ರದಲ್ಲಿ ಹೆಣೆದಿದ್ದಾರೆ. ನಾಯಕನ ಪಾತ್ರದಲ್ಲಿ ವಿನಯ್ ಕುಮಾರ್ ಮೌನದಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ನಾಯಕಿ ರಿಷಾ ಗೌಡ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಪ್ರಕೃತಿ ಪ್ರಸಾದ್ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿಯ ತಂದೆಯ ಪಾತ್ರದಲ್ಲಿ ಬಾಲ ರಾಜವಾಡಿ ಆರ್ಭಟಿಸಿದ್ದಾರೆ.

ಸಿನಿಮಾದ ಹೈಲೈಟ್ ಹಿನ್ನೆಲೆ ಸಂಗೀತ ಆಗಿದೆ. ಇದಕ್ಕೆ ಪೂರಕವಾಗಿ ಸಂಕಲನ ಹಾಗೂ ಛಾಯಾಗ್ರಹಣ ಕೆಲಸ ಮಾಡಿದೆ.

ಲವ್, ಫ್ಯಾಮಿಲಿ ಕಂಟೆಂಟ್ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಓಕೆ ಅನಿಸಬಹುದು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!