‘ಪೆದ್ದಿ’ಯಲ್ಲಿ ಶಿವಣ್ಣ ವಿಲನ್‌?

ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಪಾತ್ರದ ಬಗ್ಗೆ ಕುತೂಹಲ ವ್ಯಕ್ತವಾಗಿದೆ.

ಟ್ರೈಲರ್‌ನಲ್ಲಿ ಕೆಲವೇ ಕ್ಷಣ ಕಾಣಿಸಿಕೊಂಡಿದ್ದ ಶಿವಣ್ಣ ಅವರ ‘ಗೌರನಾಯ್ಡು’ ಪಾತ್ರ   ಅಭಿಮಾನಿಗಳ ಚರ್ಚೆಯ ಕೇಂದ್ರಬಿಂದುವಾಗಿದೆ. ಗೌರನಾಯ್ಡು’ ಪಾತ್ರದಲ್ಲಿ ಗ್ರೇ ಶೇಡ್‌ಗಳು ಅಥವಾ ಕಥೆಯ ದಿಕ್ಕನ್ನೇ ಬದಲಿಸುವ ತಿರುವುಗಳು ಇರಬಹುದೆಂಬ ಚರ್ಚೆ ಜೋರಾಗಿದೆ. ರಾಮ್ ಚರಣ್ ಮತ್ತು ಶಿವರಾಜ್‌ಕುಮಾರ್ ಮುಖಾಮುಖಿಯಾಗುವ ದೃಶ್ಯಗಳು ಚಿತ್ರದ ಪ್ರಮುಖ ಹೈಲೈಟ್ ಆಗಲಿವೆ ಎಂಬ ನಿರೀಕ್ಷೆ ಇದೆ.

‘ಪೆದ್ದಿ’ ಯ ತಮ್ಮ ಪಾತ್ರ ವಿಭಿನ್ನ ಹಾಗೂ ಸವಾಲಿನದ್ದಾಗಿದೆ.  ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ಈ ಪಾತ್ರವನ್ನು ಬರೆಯುವಾಗಲೇ ಶಿವಣ್ಣ ಅವರನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರು. ಬೇರೆ ಯಾರನ್ನೂ ಪರಿಗಣಿಸದೆ ಕಥೆಯೊಂದಿಗೆ ತಮ್ಮನ್ನು ಸಂಪರ್ಕಿಸಿದ್ದರು ಎಂದು ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

ಟ್ರೈಲರ್‌ನಲ್ಲಿ ಗೌರನಾಯ್ಡು ಪಾತ್ರವನ್ನು ಅತ್ಯಂತ ಗಂಭೀರ ಮತ್ತು ಇಂಟೆನ್ಸ್ ರೀತಿಯಲ್ಲಿ ತೋರಿಸಲಾಗಿದೆ. ಪಾತ್ರದ ನಿಜ ಸ್ವರೂಪವನ್ನು ಚಿತ್ರತಂಡ ಉದ್ದೇಶಪೂರ್ವಕವಾಗಿ ರಹಸ್ಯವಾಗಿಟ್ಟಿದೆ. ಸಂದರ್ಶನದಲ್ಲಿ ಪಾತ್ರ ಪಾಸಿಟಿವ್ ಅಥವಾ ನೆಗೆಟಿವ್ ಎಂಬ ಪ್ರಶ್ನೆಗೆ ಶಿವಣ್ಣ ನಗುತ್ತಲೇ ಪ್ರತಿಕ್ರಿಯಿಸಿದ ರೀತಿ  ಅನುಮಾನಗಳಿಗೆ ಕಾರಣವಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!