ಬಾಲಿವುಡ್ ಗೆ ಕಾಲಿಟ್ಟ ಶಿವಣ್ಣ

ಹಿರಿಯ ನಟ ಶಿವರಾಜ್ ಕುಮಾರ್  ಅವರು  ಆರ್. ಚಂದ್ರು ನಿರ್ದೇಶನದ ಇನ್ನೂ ಹೆಸರಿಡದ ಹೊಸ ಸಿನಿಮಾ ಮೂಲಕ  ಹಿಂದಿ ಚಿತ್ರರಂಗ ಪ್ರವೇಶಿಸಿದ್ದಾರೆ.

ಕನ್ನಡ – ಹಿಂದಿಯಲ್ಲಿ ಏಕಕಾಲಕ್ಕೆ  ಸಿನಿಮಾ ನಿರ್ಮಾಣವಾಗಲಿದೆ. ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಮತ್ತು ಆರ್‌ಸಿ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಿಸಲಾಗುವ ಈ ಯೋಜನೆಯನ್ನು   ಬಹುಭಾಷಾ ಸಿನಿಮಾವಾಗಿ ತಯಾರಿಸಲು ಪ್ಲಾನ್ ಮಾಡಲಾಗಿದೆ.  ಚಿತ್ರವನ್ನು ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗುವುದು. ಬಹು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತೆಲುಗು, ತಮಿಳು ಸಿನಿಮಾ ನಂತರ  ಶಿವರಾಜ್ ಕುಮಾರ್ ಬಾಲಿವುಡ್ ವೇಶಿಸಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ  ಶಿವರಾಜ್‌ಕುಮಾರ್ ಹೀರೋ ಆಗಿ ನಟಿಸಲಿದ್ದಾರೆ.  ಆಗಸ್ಟ್ 28 ರಂದು ಮುಂಬೈನಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಶೀರ್ಷಿಕೆ ಮತ್ತು ಮೋಷನ್ ಪೋಸ್ಟರ್  ಅನಾವರಣಗೊಳಿಸಲಾಗುವುದು.

ಪ್ಯಾನ್ ಇಂಡಿಯಾ ಮಟ್ಟದಲ್ಲಿ  ಗ್ಲೋಬಲ್ ಲೆವೆಲ್‌ನಲ್ಲಿ ಈ ಪ್ರಾಜೆಕ್ಟ್‌ ತಯಾರಾಗಲಿದೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಸಿದ್ಧವಾಗಲಿದೆ. ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ  ಚಿತ್ರ ರಿಲೀಸ್ ಆಗಲಿದೆ.

ಶಿವಣ್ಣ ಹೀರೋ ಆಗಿ ಅಭಿನಯಿಸಲಿರುವ ಈ ಚಿತ್ರದಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯ ಟಾಪ್ ಸ್ಟಾರ್ಸ್  ನಟಿಸಲಿದ್ದಾರೆ. ನಿರ್ಮಾಪಕ ಆನಂದ್ ಪಂಡಿತ್  ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಗೆ  ಬೆಂಬಲ ನೀಡುತ್ತಿದ್ದಾರೆ.

ಶಿವಣ್ಣ  ತಮಿಳಿನಲ್ಲಿ ರಜನಿಕಾಂತ್ ಅವರೊಂದಿಗೆ ‘ಜೈಲರ್ 2 ‘ಮತ್ತು ತೆಲುಗು ಚಿತ್ರ ‘ಗುಮ್ಮಡಿ ನರಸಯ್ಯ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ‘ಬೇಲ್’  ಬಿಡುಗಡೆಗೆ ಸಜ್ಜಾಗುತ್ತಿದೆ. ಶ್ರೀನಿ ಅವರೊಂದಿಗೆ ‘ಎ ಫಾರ್ ಆನಂದ್ ‘ಮತ್ತು ಹೇಮಂತ್ ಎಂ ರಾವ್ ಅವರ ‘666 ಆಪರೇಷನ್ ಡ್ರೀಮ್ ಥಿಯೇಟರ್‌’ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

2023ರಲ್ಲಿ ತೆರೆಗೆ ಬಂದ ‘ಜೈಲರ್’ ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದರು. ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಶಿವಣ್ಣ ಅಭಿನಯಿಸಿದ್ದರು. ಇತ್ತೀಚೆಗೆ ತೆರೆಗೆ ಬಂದ ತೆಲುಗಿನ ‘ಪೆದ್ದಿ’ ಚಿತ್ರದಲ್ಲಿ ಶಿವಣ್ಣ ನಟಿಸಿದ್ದರು.

ಆರ್ ಚಂದ್ರು ‘ಕಬ್ಜ’ ಚಿತ್ರದ ಬಳಿಕ ಹೊಸ ಪ್ರಾಜೆಕ್ಟ್‌ಗೆ ಕೈಹಾಕಿದ್ದಾರೆ. ‘ಕಬ್ಜ’ಗಿಂತ  ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಲು ಅವರು  ಹೊರಟಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!